-:  ಪ್ರಕಟಣೆ:-

      ನ್ಯಾಯವಿಜ್ಞಾನ  ಪ್ರಯೋಗಾಲಯ ವಿವಿಧ ಘಟಕಗಳಲ್ಲಿನ ಪ್ರಯೋಗಾಲಯ ಸೇವಕರು, ಪ್ರಯೋಗಾಲಯ ಸಹಾಯಕರು  ಮತು ಇಇಜಿ ತಂತ್ರಜ್ಞರ ಹುದ್ದೆಗಳ ನೇಮಕಾತಿಗಾಗಿ ಸುಮಾರು 8560 ಅಭ್ಯರ್ಥಿಗಳಿಗೆ ದಿನಾಂಕ: 14-03-2021 ರಂದು ಬೆಂಗಳೂರು ನಗರದಲ್ಲಿನ 17 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಮಾಹಿತಿಯನ್ನು ಇಲಾಖಾ ವೆಬ್‍ಸೈಟ್ www.ksp.gov.in ನಲ್ಲಿ ಬಿಡುಗಡೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಕರೆಪತ್ರವನ್ನು ಮೇಲ್ಕಂಡ ವೆಬ್ ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಸೂಚಿಸಿದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಈ ಮೂಲಕ ತಿಳಿಯಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸದರಿ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ.

         ಉಪ ಪೊಲೀಸ್ ಆಯುಕ್ತರು, ಆಡಳಿತ, 
              ಪೊಲೀಸ್ ಆಯುಕ್ತರ ಪರವಾಗಿ,  ಬೆಂಗಳೂರು ನಗರ.

Leave a Reply

Your email address will not be published. Required fields are marked *