ಜಲಶಕ್ತಿ ಅಭಿಯಾನ-2021

 ಬೆಂಗಳೂರು, ಮಾರ್ಚ್ 20(ಕರ್ನಾಟಕ ವಾರ್ತೆ):

ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಜಲಶಕ್ತಿ ಅಭಿಯಾನ (ಜೆಎಸ್‍ಎ) 2021 “ಮಳೆ ನೀರನ್ನು ಸಂಗ್ರಹಿಸಿರಿ: ಎಲ್ಲಿ ಮಳೆಯಾಗುತ್ತದೆಯೋ-ಯಾವಾಗ ಮಳೆಯಾಗುತ್ತದೆಯೋ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಿಲಾಗುತ್ತಿದೆ.
ಮಾರ್ಚ್ 22 ರಂದು (ವಿಶ್ವ ನೀರಿನ ದಿನದಂದು) ಪ್ರಧಾನ ಮಂತ್ರಿಗಳು ದೇಶದಲ್ಲಿನ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ/ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಂದಿಗೆ/ಗ್ರಾಮ ಪಂಚಾಯತ್ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.  
ಜಲಶಕ್ತಿ ಅಭಿಯಾನ-2021 ಕಾರ್ಯಕ್ರಮ ಮಾರ್ಚ್ 22 ರಿಂದ ಆರಂಭವಾಗಿ ನವೆಂಬರ್ 30 ರ ವರೆಗೆ ನಡೆಯಲಿದೆ. ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ರಾಜ್ಯದ ನೋಡೆಲ್ ಅಧಿಕಾರಿಯಾಗಿರುತ್ತಾರೆ.  ಅವರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ನಡೆಸಲಿದ್ದಾರೆ. ಮಾರ್ಚ್ 22 ರಂದು ಪ್ರಧಾನ ಮಂತ್ರಿಗಳು ಈ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಈ ವಾರ್ಷಿಕ ಅಭಿಯಾನವನ್ನು ರಾಜ್ಯದಲ್ಲಿ ಯಶಸ್ವಿ ಅನುಷ್ಠಾನಗೊಳಿಸಲು ಮುಖ್ಯ ಕಾರ್ಯದರ್ಶಿಗಳು ಸೂಚಿಸಿರುತ್ತಾರೆ ಎಂದು ಅಧಿಕೃತ ಪ್ರಟಕಣೆ ತಿಳಿಸಿದೆ.

Leave a Reply

Your email address will not be published. Required fields are marked *