ರೋಟರಿ ಶಿಕ್ಷಕರ ನೆರವಿಗೆ ಅರ್ಜಿ ಆಹ್ವಾನ*

 ✅✅🙏🏻🙏🏻

ಬೆಂಗಳೂರು: ಕೋವಿಡ್‌ಗೆ ತುತ್ತಾದ ಶಿಕ್ಷಕರು ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ರೋಟರಿ ಸಂಸ್ಥೆಯು ’ಗುರುದಕ್ಷಿಣೆ‘ ಯೋಜನೆಯಡಿ ಶಿಕ್ಷಕರಿಗೆ ನೆರವು ನೀಡುವ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.

ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹಾಗೂ ನಿವೃತ್ತಿ ಹೊಂದಿರುವ ಶಿಕ್ಷಕರೂ ನೆರವಿಗೆ ಅರ್ಜಿ ಸಲ್ಲಿಸಬಹುದು. ಶಿಕ್ಷಕರಿಗೆ ತಲಾ ₹50 ಸಾವಿರ ಆರ್ಥಿಕ ನೆರವು ಸಿಗಲಿದೆ. ವೈದ್ಯಕೀಯ ನೆರವಿನ ಸಂದರ್ಭದಲ್ಲಿ ನೇರವಾಗಿ ಆಸ್ಪತ್ರೆಗಳಿಗೆ ಆರ್ಥಿಕ ಸಹಾಯ ಮಾಡಲಾಗುವುದು.

ಅರ್ಜಿ ಸಲ್ಲಿಸುವವರು ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಅವುಗಳನ್ನು ಗುರುದಕ್ಷಿಣೆ ತಂಡ ಪರಿಶೀಲಿಸಲಿದೆ. ಫಲಾನುಭವಿಗಳನ್ನು ಸಮಿತಿಯೇ ಆಯ್ಕೆ ಮಾಡಲಿದೆ. ಅರ್ಜಿಗಳನ್ನು ಜೂನ್‌ 10ರ ಸಂಜೆ 6 ಗಂಟೆಯೊಳಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಸಲು https://www.rotarygurudakshine.org/foundation/#form ಅನ್ನು ಬಳಸಬಹುದು.

ಸಂಪರ್ಕ:9652982604, 9449750492, 9845683875

Leave a Reply

Your email address will not be published. Required fields are marked *