ಕೊರೋನಾ ಹೆಚ್ಚಾಗಿರುವುದರಿಂದ ಪರೀಕ್ಷೆ ಬೇಡ: ವಾಟಾಳ್ ನಾಗರಾಜ್

 ಚಾಮರಾಜನಗರ, (ಮೇ.22): ದೇಶದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವುದರಿಂದ ಕೆಲ ರಾಜ್ಯಗಳಲ್ಲಿ 10 ಹಾಗೂ12ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಿವೆ. 

ಕರ್ನಾಟಕದಲ್ಲೂ ಸಹ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧಗಳ ಚರ್ಚೆಗಳು ಈಗಾಗಲೇ ನಡೆದಿವೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆ ನಡೆಸಲು ಚಿಂತನೆಗಳನ್ನ ನಡೆಸಿದ್ದು, ಈ ಬಗ್ಗೆ ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಆದ್ರೆ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮಕ್ಕಳಿಗೆ ಈ ವರ್ಷ ಪರೀಕ್ಷೆ ಬೇಡ.. ಹಾಗೆಯೇ ಅವರನ್ನ ಪಾಸ್ ಮಾಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಒತ್ತಾಯಿಸಿದ್ದಾರೆ. ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್, ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳ ಜೊತೆ ಆಟವಾಡುವುದು ಬೇಡ. ಈಗಾಗಲೇ ಹಲವು ರಾಜ್ಯಗಳಲ್ಲಿ ಎಸ್‍ಎಸ್‍ಎಲ್ ವಿದ್ಯಾರ್ಥಿಗಳನ್ನ ಪರೀಕ್ಷೆ ಇಲ್ಲದೇ ಪಾಸ್ ಮಾಡಿದ್ದಾರೆ. ಯಾವ ಕಾರಣಕ್ಕೂ ನೀವು ಮಕ್ಕಳಿಂದ ಪರೀಕ್ಷೆ ಬರೆಸಲು ಆಗಲ್ಲ. ಒಂದು ತಿಂಗಳು ಪಾಠವೇ ಆಗಿಲ್ಲ. ಆದ್ದರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳನ್ನ ಪಾಸ್ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *