ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗಳಿಗೆ ಮುಂಬಡ್ತಿ : ಉನ್ನತ ಅಧಿಕಾರಿಗಳಿಗೆ ಕೃತಜ್ಞತೆ

ಹುಬ್ಬಳ್ಳಿ : ಸರ್ಕಾರಿ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದು  ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಇದೇ ದಿನಾಂಕ: 21ರಂದು 148 ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಯಿಂದ ಗ್ರುಪ್-ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗಳಿಗೆ ಮುಂಬಡ್ತಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ಸಂತಸ ತಂದಿದೆ ಎಂದು ಪ್ರೊ.ಎಲ್.ಆರ್.ವೈದ್ಯನಾಥನ್ ಸಮಿತಿಯ ಸದಸ್ಯ ಡಾ.ಬಸವರಾಜ ಧಾರವಾಡ ತಿಳಿಸಿದ್ದಾರೆ.

ದೈಹಿಕ ಶಿಕ್ಷಣ ಹಾಗೂ ಶಿಕ್ಷಕರಿಗೆ ಕಾಯಕಲ್ಪ ಕಲ್ಪಿಸಲು ನಿರ್ಧರಿಸಿದವರು ಸಭಾಪತಿ ಬಸವರಾಜ ಹೊರಟ್ಟಿಯವರು 2006-07ರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದಾಗ
ದೈಹಿಕ ಶಿಕ್ಷಣವನ್ನು ಸಮಗ್ರವಾಗಿ ಪರಿಷ್ಕರಿಸಲು ದೈಹಿಕ ಶಿಕ್ಷಣ ತಜ್ಞರ  ಸಮಿತಿ ರಚಿಸಿ ಆದೇಶ ಹೊರಡಿಸಿದ್ದರು. ದಿನಾಂಕ:27-06-2006 ರಂದು ಪ್ರೊ.ಎಲ್.ಆರ್.ವೈದ್ಯನಾಥನ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಸದಸ್ಯರಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರೊ.ಶೇಷಣ್ಣ, ಗದುಗಿನ ಡಾ.ಬಸವರಾಜ ಧಾರವಾಡ, ಬೆಂಗಳೂರು ವಿಶ್ವವಿದ್ಯಾಲಯದ ಡಾ.ಸುಂದರರಾಜ್ ಅರಸ, ರಾಣೆಬೆನ್ನೂರಿನ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಗಿರಿಜಾ ದುರ್ಗದಮಠ, ರಾಷ್ಟ್ರೀಯ ಕ್ರೀಡಾಪಟು ಶಿವಮೊಗ್ಗದ ಶ್ರೀಮತಿ ಸುವರ್ಣ ನಾಗರಾಜ ನೇತೃತ್ವದಲ್ಲಿ ಸಮಿತಿ ರಚಿಸಿ ಪ್ರಮುಖ ಹತ್ತು ಅಂಶಗಳ ಮೇಲೆ ವರದಿ ಸಲ್ಲಿಸಲು ಅಂದು ಸರ್ಕಾರ ಆದೇಶ ಹೊರಡಿಸಿತ್ತು. ಅದರನ್ವಯ ಆರು ತಿಂಗಳಲ್ಲಿ ರಾಜ್ಯಾದ್ಯಂತ ಸಭೆ ಸಮಾರಂಭಗಳನ್ನು ಚಿಂತನಮಂಥನಗಳನ್ನು ಪ್ರಶ್ನಾವಳಿಗಳ ಮೂಲಕ ಮಹತ್ವದ ವಿಷಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿಯನ್ನು ನೀಡಲಾಗಿತ್ತು. ಅದರ ಪ್ರತಿಫಲವಾಗಿ 1ನೇ ವರ್ಗದಿಂದ 10ನೇ ವರ್ಗದ ವರೆಗೆ ದೈಹಿಕ ಶಿಕ್ಷಣ ಕಡ್ಡಾಯ ಜಾರಿಗೆ ಬಂದಿದ್ದು 2011ರಲ್ಲಿ 202 ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗಳು ಮೇಲ್ದರ್ಜೆಗೇರಿದವು. 12 ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗಳು ಮೇಲ್ದರ್ಜೆಗೆ 1 ರಿಂದ 9ನೇ ವರ್ಗದವರಿಗೆ ದೈಹಿಕ ಶಿಕ್ಷಣ ಪಠ್ಯಪುಸ್ತಕ ಪೂರೈಸಲಾಯಿತು. ಹಿಂದುಳಿದ ಪ್ರದೇಶಗಳಿಗೆ 2009-10ರಲ್ಲಿ 254.70 ಲಕ್ಷ ಬಿಡುಗಡೆ 2010-11ರಲ್ಲಿ 200.00ಲಕ್ಷ ಬಿಡುಗಡೆ ಹಾಗೂ 150.00 ಲಕ್ಷಗಳು ವಿವಿಧ ಶಾಲೆಗಳ ಕ್ರೀಡಾಭಿವೃದ್ಧಿಗೆ 50.00ಲಕ್ಷ ಉನ್ನತೀಕರಿಸಿದ ಹುದ್ದೆಗಳ ವೇತನಕ್ಕೆ 2011-12ನೇ ಸಾಲಿಗೆ 2014-15ನೇ ಸಾಲಿನಲ್ಲಿ 150.00 ಲಕ್ಷ ರೂಪಾಯಿ ಬಿಡುಗಡೆ, 69.00 ಲಕ್ಷ ದೈಹಿಕ ಶಿಕ್ಷಣ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಕ್ರೀಡಾನಿಧಿಯನ್ನು ವಲಯವಾರು ಹಂಚಿಕೆಗೆ ಅವಕಾಶ ಕ್ರೀಡಾ ಸಂಘಟನೆ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆ ಹೀಗೆ ಬಸವರಾಜ ಹೊರಟ್ಟಿಯವರ ವಿಶೇಷ ಕಾಳಜಿಯಿಂದ ವೈದ್ಯನಾಥನ್ ವರದಿಯ ಫಲಶೃತಿಗಾಗಿ ಸಾಕಷ್ಟುಪ್ರಗತಿಗಳು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಆದವು.
 
ದೈಹಿಕ ಶಿಕ್ಷಣ ಶಿಕ್ಷಕರಿಗೆ ಸ್ವಾತಂತ್ರ್ಯದ ಪೂರ್ವದಲ್ಲಿ, ಸ್ವಾತಂತ್ರ್ಯದ ನಂತರದಲ್ಲಿ ಯಾವುದೇ ನಿರ್ಧಿಷ್ಟ ಮಾನದಂಡಗಳು ಹಾಗೂ ಹಕ್ಕುಗಳಿಗಾಗಿ ಬೇಡಿಕೆ ಇಡಲು ನಿಯಮಾವಳಿಗಳ ಒಂದು ಪರೀಧಿ ಇಲ್ಲದಾಗಿತ್ತು. ಕೇವಲ ದೈಹಿಕ ಶಿಕ್ಷಕರ ನೇಮಕವೊಂದನ್ನು ಬಿಟ್ಟರೆ ಮತ್ಯಾವ ಪ್ರಗತಿ ಈ ಕ್ಷೇತ್ರದಲ್ಲಿ ಆಗಿರಲಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರಿಗೆ ಪ್ರೊ.ಎಲ್.ಆರ್.ವೈದ್ಯನಾಥನ್ ವರದಿ ಒಂದು ರೀತಿ ಭಗವದ್ಗೀತೆ, ಕುರಾನ ಬೈಬಲ್‍ನಂತಾಗಿದೆ. ಬೇಕು ಬೇಡಿಕೆಗಳ ಹಕ್ಕುಗಳನ್ನು ಕೇಳಲು ಈ ವರದಿಯೊಂದು ಆಧಾರವಾಗಿದೆ. 2006-07ರಲ್ಲಿ ಬಸವರಾಜ ಹೊರಟ್ಟಿಯವರು ಶಿಕ್ಷಣ ಸಚಿವರು ಆದಾಗಿನಿಂದ ಸಾಕಷ್ಟು ಪ್ರಗತಿಗಳು ಆಗಿವೆ. ಕಳೆದ 5 ವರ್ಷಗಳಿಂದ ಶಿಕ್ಷಕರ ಬಡ್ತಿಗಳಾಗಲಿ ವೃಂದ ಮತ್ತು ನೇಮಕಾತಿಗಳ ಪ್ರಗತಿಯು ಆಗದೇ ಇರುವುದು ಸಾಕಷ್ಟು ವಿಷಾದದ ಸಂಗತಿಯಾಗಿತ್ತು. ವಿಳಂಬವಾದ ನೀತಿಯನ್ನು ಖಂಡಿಸಿ ಸಾಕಷ್ಟು ಬಾರಿ ಬಸವರಾಜ ಹೊರಟ್ಟಿಯವರು ಸರ್ಕಾರಕ್ಕೆ ಶಿಕ್ಷಣ ಇಲಾಖೆಗೆ ಎಚ್ಚರಿಸಿದ್ದರು. ಪ್ರಸ್ತುತ ಶಿಕ್ಷಣ ಸಚಿವರಾದ ಸುರೇಶಕುಮಾರ ಅವರು 148 ಹಿರಿಯ ಪ್ರೌಢಶಾಲಾ ದೈಹಿಕ ಶಿಕ್ಷಕರಿಗೆ ಬಡ್ತಿ ನೀಡಲು ಮುಂದಾಗಿದ್ದಾರೆ. ಬಹುದಿನದ ಬೇಡಿಕೆ ಇದಾಗಿರುವುದರಿಂದ ದೈಹಿಕ ಶಿಕ್ಷಣ ಶಿಕ್ಷಕರಲ್ಲಿ ಸಾಕಷ್ಟು ಸಂತಸ ಮೂಡಿದೆ. ಇನ್ನೊಂದು ಪ್ರಮುಖ ಬೇಡಿಕೆಯಾದ ಪ್ರೌಢಶಾಲಾ ದೈಹಿಕ ಶಿಕ್ಷಕರಿಗೂ ಮುಖ್ಯೋಪಾಧ್ಯಾಯ ಹುದ್ದೆಯ ಬಡ್ತಿಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳು ರಚನೆಯಾದರೆ ಬಹುತೇಕ ಪ್ರೊ.ಎಲ್.ಆರ್. ವೈದ್ಯನಾಥನ್ ವರದಿ ಜಾರಿಗೊಂಡಂತಾಗುತ್ತದೆ ಜೊತೆಗೆ ನಮ್ಮ ಶ್ರಮಕ್ಕೆ ಸಿಕ್ಕ ಗೌರವ ಇದಾಗಿದೆ ಎಂದು ಸಮಿತಿಯ ಸದಸ್ಯರಾದ ಡಾ. ಬಸವರಾಜ ಧಾರವಾಡ ತಿಳಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಿಗಬೇಕಾದ ನ್ಯಾಯಯುತ ಹಕ್ಕುಗಳಿಗೆ ಸ್ಪಂದಿಸುತ್ತಾ ಬಂದ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಶಿಕ್ಷಣ ಸಚಿವರಾದ ಸುರೇಶಕುಮಾರ ಅವರಿಗೆ ವಿಧಾನಪರಿಷತ್ ಸದಸ್ಯರಿಗೆ, ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *