ತರಬೇತಿ ತರಗತಿಗಳು / ಖಾಸಗಿ ಮನೆಪಾಠ

 ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಶಾಲೆಗಳ ಶಿಕ್ಷಣದ ಚಿತ್ರಣವು ತಂದೆ-ತಾಯಿಗಳು ಮತ್ತು ವಿದ್ಯಾರ್ಥಿಗಳ ಮೇಲೆ ಒತ್ತಡ ಬೀರುತ್ತದೆ. ಕೆಲವು  ತಂದೆ-ತಾಯಿಗಳು ಶಾಲಾವಧಿ ಮುಗಿದ ನಂತರ ತಮ್ಮ ಮಕ್ಕಳನ್ನು ತರಬೇತಿ ತರಗತಿಗಳಿಗೆ ಸೇರಿಸುವುದರಿಂದ ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕ ಗಳಿಸುತ್ತಾರೆ ಎಂದು ಯೋಚಿಸುತ್ತಾರೆ. ಆದರೆ ಕೆಲವು ತಂದೆ-ತಾಯಿಗಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುವುದು ಅರ್ಹತೆ ಎಂದು ನಂಬುತ್ತಾರೆ, ಅದರಲ್ಲಿ ಕೆಲವರು ಮಾತ್ರ

ಜ್ಞಾನವನ್ನು ಪಡೆದುಕೊಂಡು, ವಿಷಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲಿ ಎಂದು ಬಯಸುತ್ತಾರೆ. ಆದರೆ ತರಬೇತಿ ಸಂಸ್ಥೆಗಳು ಇದರ ಕಡೆ ಗಮನ ಕೊಡುತ್ತಿಲ್ಲ. ತರಗತಿಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿರುವುದರಿಂದ, ಅಧ್ಯಾಪಕರಿಗೆ ಎಲ್ಲ ಮತ್ತು ಪ್ರತಿಯೊಂದು ಮಕ್ಕಳಿಗೆ ಗಮನ ಕೊಡಲು ತುಂಬಾ ಕಷ್ಟವಾಗುತ್ತದೆ. ಬುದ್ಧಿವಂತ ಮತ್ತು ಪರವಾಗಿಲ್ಲ ಎನ್ನುವಂತಹ ಮಕ್ಕಳು ಹೇಗೋ ಸರಿದೂಗಿಸಿಕೊಂಡು ಪರೀಕ್ಷೆಯಲ್ಲಿ ಒಳ್ಳೆಯ ಅಂಕವನ್ನು ಪಡೆಯುತ್ತಾರೆ. ಆದರೆ ದುರ್ಬಲವಾಗಿರುವ ಕೆಲವು ವಿದ್ಯಾಥಿರ್Àಗಳು ಯಾವಾಗಲೂ ತೊಂದರೆಯಲ್ಲಿರುತ್ತಾರೆ. ಏಕೆಂದರೆ ಅವರಿಗೆ ಸಿಗಬೇಕಾದಂತಹ ಗಮನ ಸಿಗುವುದಿಲ್ಲ.

ಇಂದು ಹೆಸರಾಂತ ತರಬೇತಿ ಕೇಂದ್ರಗಳು ಹಾಗೂ ಅವುಗಳ ತರಬೇತು ಆಕಾಂಕ್ಷಿಗಳು ಇವೆರಡರ ಅಂಕಿ-ಅಂಶಗಳು ಒಂದಕ್ಕೊಂದು ಪೂರಕವಾಗಿಲ್ಲ,

ನಗರಗಳಲ್ಲ ಯಶಸ್ವಿ ಭವಿಷ್ಯ ಎಂದರೆ ಪ್ರಸಿದ್ಧಿ ಪಡೆದ ಶಾಲೆಯಿಂದ, ಅಷ್ಟೇ ಪ್ರಸಿದ್ಧಿ ಪಡೆದ ಕಾಲೇಜಿಗೆ ದಾಖಲಾಗುವುದು. ಇದು ಹೆಚ್ಚಿನ ಮಕ್ಕಳಿಗೆ ಹೆಚ್ಚಿನ ಒತ್ತಡ ನೀಡುತ್ತದೆ. ಬಹಳಷ್ಟು ಶಾಲೆಗಳು ತರಬೇತಿ ಪಡೆದ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಹೆಸರಾಂತ ಶಾಲೆಗಳು ಕೂಡ ಬಹುರಾಷ್ಟ್ರೀಯ     ಕಂಪನಿಗಳ ವೃತ್ತಿಗೂ ಹಾಗೂ ಶಿಕ್ಷಕ ವೃತ್ತಿಗೂ ಇರುವ ಸಂ¨ಳಗಳ ವ್ಯತ್ಯಾಸಗಳ ಕಾರಣಕ್ಕಾಗಿ ಇರುವ ಶಿಕ್ಷಕರ ಕೃತಕ ಬರ ಏರ್ಪಟ್ಟಿದೆ. ಕೆಲವು ಶಾಲೆಗಳು  ಐಬಿ, ಸಿಬಿಎಸಿಇ, ಐಸಿಎಸಿಇ ಪಠ್ಯಕ್ರಮವನ್ನು ಹೊಂದಿದ್ದÀರೂ ವೇಗವಾಗಿ ಬದಲಾಗುತ್ತಿರುವ ಶಿಕ್ಷಕರ ಸಾಮಥ್ರ್ಯದಲ್ಲಿಕೊರತೆಯಿದ್ದರೆ, ಇನ್ನೂ ಕೆಲವರಿಗೆ ತರಬೇತಿಅನುಭವ ಇಲ್ಲ. ಇಷ್ಟೆ ಅಲ್ಲದೆ ಈಗಿನ ಶಾಲೆಗಳು ವಿದ್ಯಾರ್ಥಿ ಕೇಂದ್ರವಾಗಿರದೆ ಪರೀಕ್ಷೆಯನ್ನು ಕೇಂದ್ರೀಕರಿಸುತ್ತಿದೆಅವರ ಶಾಲಾ    ಚಟುವಟಿಕೆಗಳನ್ನು ಪರೀಕ್ಷಾ ದೃಷಿಯಿಂದ ಹೇಳಿಕೊಟ್ಟಲ್ಪ್ಲಟ್ಟಿರುªರೆÀ ವಿನಹ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂತರಾಗಿರುವುದಿಲ್ಲ.ಇದು ಕೂಡ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ತರಬೇತಿ ಕೇಂದ್ರಗಳಿಗೆ ಅಥವಾ ವೈಯಕ್ತಿಕ ತರಬೇತುದಾರರನ್ನು ಹುಡುಕುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *