ಸ್ಪರ್ಧಾತ್ಮಕ ಶಿಕ್ಷಣ: ಸಂಪಾದನೆಯೇ ಇಂದಿನ ಪ್ರಮುಖ ಗುರಿ. . . . !
ಶಿಕ್ಷಣ
ಎನ್ನುವ ಸವಕಲು!
ಒಮ್ಮೆ ಸ್ನೇಹಿತನೊಂದಿಗೆ ಹೋಗುವಾಗ, ಯಾಕೋ ಏನೋ ಪಟ
ಪಟನೆಂದು ಮಾತನಾಡುವ ಅವನು ಮೌನವಾಗಿ ನಡೆದುಕೊಂಡು
ಬರುತ್ತಿದ್ದ. ಯಾಕೋ ಏನಾಯಿತೋ ಎಂದು
ಕೇಳಿದೆ. ಅದರೂ ಅವನು ಮೌನ
ಮುರಿಯಲಿಲ್ಲ. ಆಯಿತು, ಅವನೇ ಮಾತನಾಡಲಿ
ಎಂದು ಅವನೊಂದಿಗೆ ಸ್ವಲ್ಪ ದೂರ ಸಾಗಿದೆ.
ಅಂತು ಒಂದು ತಹಬಂದಿಗೆ ಬಂದ
ಎಂದು ಕಾಣಿಸುತ್ತದೆ.
ಈಗಿನ ಕಾಲದಲ್ಲಿ ಜಾಸ್ತಿ ಓದಬಾರದು ಕಣೋ
ಎಂದ. ಹಾಗೆ ನೋಡಿದರೆ, ಅವನು
ಓದಿದ್ದು ನನಗಿಂತ ಕಡಿಮೆಯೇ! ನನಗೆ
ಆಶ್ವರ್ಯ ಮತ್ತು ಅನುಮಾನವಾಯ್ತು (?) ನನ್ನೊಂದಿಗಿನ
ಸ್ನೇಹ, ಎಲ್ಲಿಯಾದರೂ ಇವನಿಗೆ ಕೀಳರಿಮೆಗೆ ದೂಡಿದೆಯೋ
ಅನ್ನು ಆತಂಕವೂ ಕ್ಷಣ ಕಾಲ
ಕಾಡಿದ್ದು ನಿಜ! ಅದರೂ ಅವನೇ
ಬಾಯಿ ಬಿಡಲಿ, ದುಡುಕುವುದು ಬೇಡ
ಅನಿಸಿ, ಕುತೂಹಲದಿಂದ ಅವನ ಕಡೆ ನೋಡಿದೆ.
ಅದೇ ಕಣೋ ನಮ್ಮ ದೊಡ್ಡಪ್ಪನ
ಮಕ್ಕಳು, ಒಬ್ಬ ಇಂಜಿನಿಯರ್, ಇನ್ನೊಬ್ಬ
ಡಾಕ್ಟು, ಇಬ್ರು ಫಾರಿನ್ ನಲ್ಲಿದ್ದಾರೆ,
ಇಲ್ಲಿ ಮುದುಕ ಮಕ್ಳು..ಮಕ್ಳು
ಅಂತ ಬಡ್ಕೋತ್ತದೆ. ನಮ್ಜೊತೆ ಇರು ಬಾ
ಅಂದ್ರೂ ಬರೋಲ್ಲ! ಮೊನ್ನೆ ಮಕ್ಳು
ಬಂದು, ವೃದ್ಧಾಶ್ರಮಕ್ಕೆ ಹಾಕಿ ಹೋಗಿದ್ದಾರೆ. ಏನ್
ಮಕ್ಳೋ! ಏನ್ ಓದೋ! ಅರ್ಥವಾಗೊಲ್ಲ
ಶ್ರೀ..,ಅಂದ
ಅವ್ನು ನನ್ನ ಕರೆಯೋದೇ ಹಾಗೇ,
ನೀನು ಹೇಳಿದ್ರೆ ಕೇಳ್ತಾರಾ? ನಿನಗ್ಯಾಕೋ ಅವರ ಉಸಾಬರಿ…! ಅರಪ್ಪ,
ಮಕ್ಳು ಏನಾದರೂ ಮಾಡೊಳ್ಳಿ ಬಿಡು
ಅಂದೆ.
ಅಲ್ವೋ ನಾವು, ನಮ್ಮಳ್ಳಿಲೀ PRIMARY SCHOOLನಲ್ಲಿ ಓದುತ್ತಿದ್ದಾಗ, ಶಾಲೆಯ
ಒಳ ಭಾಗದ ಗೋಡೆಯ ಮೇಲೆ
ಬರೆದಿದ್ದ ಕೆಲವು ಸಾಲುಗಳು ನೆನಪಾದವು. “ವಿದ್ಯೆ
ಇಲ್ಲದ ಮನುಷ್ಯ ಹಂದಿಗಿ0ತಲೂ
ಕಡೆ” ಅಂತ!
ಇಂತಹ ವಿದ್ಯೆ ಕಲ್ತವರನ್ನಾ ಏನು
ಅನ್ನಬೇಕು? ಓ ಇದು ಇವನ
ಪ್ರಶ್ನೆ. ಅವನ ಒಳತೋಟಿಯಲ್ಲಿ ನಡೆಯುತ್ತಿದ್ದ
ತುಮುಲು ಇಷ್ಟಿಷ್ಟೇ ತಿಳಿಯತೊಡಗಿತು.
ಈಗಿನ ಕಾಲದಲ್ಲಿರುವ ವಿದ್ಯೆ ಏನನ್ನು ಕಲಿಸುತ್ತಿದೆ?
ಓದು..ಓದು! ಮಾರ್ಕ್ಸ್, ಸರ್ಟಿಫಿಕೇಟ್,
ಅದರಲ್ಲೂ
ಖೊಟ್ಟಿ
ವಿದ್ಯೆ ಅಲ್ಲವೇ? ಮೊನ್ನೆ ಅದ್ಯಾವುದೋ
ಒಂದು ಸಿನೆಮಾನೂ ಬಂದು ಹೋಯ್ತಲ್ಲ, ಪ್ರಾಂಚಿಕ
ಜ್ಞಾನವನ್ನು ತುಂಬಿಕೊಡ ವಿದ್ಯೆ ಎಷ್ಟಿದ್ದರೇನು? ಬರೀ
ಹಣ ಗಳಿಯಷ್ಟೇ ಅಂದರೆ ಹೇಗೆ? ಮಾನವೀಯ
ಮೌಲ್ಯಗಳಿಗೆ ಬೆಲೆ ಇಲ್ಲವೇ? ವಿದ್ಯೆ
ವಿನಯವನ್ನು ಕಲಿಸುತ್ತಿಲ್ಲವೇಕೆ?
ಯಥೇಚ್ಛವಾಗಿ
ಅವಿಷ್ಕಾರವಾಗುತ್ತಿರುವ ತಾಂತ್ರಿಕತೆ, ಹೊಸದನ್ನು ಕಾಣುವ ತವಕ ನಮ್ಮನ್ನು
ಒಂದು ಯಂತ್ರದAತೆ ಮಾಡಿರುವುದು
ನಿಜವಲ್ಲವೇ? ನಮಗೆ ದೊರತ ಶಿಕ್ಷಣವೆ
ಶ್ರೇಷ್ಟ ಎನಿಸಿದ್ದು ಸುಳ್ಳ. ಉದ್ಯೋಗ ಗಿಟ್ಟಿಸುವುದು
ಮತ್ತು ಹಣ ಸಂಪಾದನೆಗೆ ಮಾತ್ರ
ಸೀಮಿತವಾಗಿದೆ. ವಿದ್ಯೆ ಎನ್ನುವುದು ವ್ಯಾಪಾರೀಕರಣವಾಗಿರುವಾಗ,
ಸಂಸ್ಕಾರವನ್ನು ನಿರೀಕ್ಷಿಸುವುದು ತರವೇ?
ಬಾಲಕೃಷ್ಣ
ಕಾಕತ್ಕರ್ ಅವರು 1985ರಲ್ಲಿ ಬರೆದ ಶಿಕ್ಷಣ
ಬಗೆಗಿನ ಒಂದು ಲೇಖನ ನೆನಪಾಯಿತು.
ಇಂದಿನ ಕಾಲದ ಮಕ್ಕಳನ್ನು ಈ
ಶಿಕ್ಷಣ, ಹೇಗೆ ತಯಾರು ಮಾಡುತ್ತಿದೆ
ಅಂದರೆ, ಬಳ್ಳಿಯಲ್ಲಿ ಬಿಟ್ಟ ಚಿಕ್ಕ ಕುಂಬಳಕಾಯಿಯನ್ನು
ಪಟ್ಟ ಮಡಿಕೆಯಲ್ಲಿಟ್ಟು, ಅಲ್ಲಲ್ಲಿ ರಂಧ್ರ ಕೊರೆದು, ಬೆಳೆಯಲು
ಬಿಡುವುದು, ಅದರ ಗಾತ್ರ ವಿಸ್ತರಿಸಿದಂತೆ,
ರಂಧ್ರದ ಒಳಗಿನಿಂದ ಕುಂಬಳಕಾಯಿಯ ಹೊರ ಚಾಚುತ್ತದೆ ಅಲ್ಲವೇ?
ಈಗಲೂ ಪಡವಲ ಕಾಯಿಗೆ ಕಲ್ಲು
ಕಟ್ಟುವುದನ್ನು ನೋಡುತ್ತೇವೆ. ಅದರ ಉದ್ದೇಶ ನೀಳವಾಗಿ
ಬೆಳೆಯಲಿ ಎಂದು! ಹಾಗೆಯೇ ಇಂದಿನ
ಶಿಕ್ಷಣ. ಅಲ್ಲದೆ, ಎಷ್ಟೋ ಶಾಲೆಗಳಲ್ಲಿ ಎಂತಹವರು ಪ್ರಿನ್ಸಿಪಾಲ್ಲರಾಗಿರುತ್ತಾರೆ ಎಂದರೆ, ಅವರಿಗೆ
ವಿದ್ಯೆ ನೇವೇದ್ಯವಾಗಿರುತ್ತದೆ. ಹೆಸರಿನ ಹಿಂದೆ ಒಂದಷ್ಟು
ಡಿಗ್ರಿಗಳು! ಮೊದಲು ವಿಶ್ವವಿದ್ಯಾಲಯಗಳು ಕೊಡುವ
ಡಾಕ್ಟರೇಟ್ ಇಂದು, ಕಡಲೆಕಾಯಿ ವ್ಯಾಪಾರದಂತೆ
ಕಾಣುತ್ತಿದೆ.
‘ಲೋ ಶ್ರೀ,
ಮುಂದೆ ನೋಡೋ’ ಅನ್ನುವ
ಅವನ ಕೂಗು ನನ್ನನ್ನು ಪುನಃ
ವಾಸ್ತವಕ್ಕೆ ಎಳೆದು ತಂತು. ಏಕೆಂದರೆ,
ನನ್ನ ಮುಂದೆ ಚಿಕ್ಕ ಗುಂಡಿ
ತೋಡಿ, ಮುಚ್ಚದೇ ಹೋಗಿದ್ದರು. ಅವನು
ಎಚ್ಚರಿಸದೇ ಹೋಗಿದ್ದರೆ, ಕಾಲಿಗೆ ಒಂದು ಗತಿ
ಆಗುತ್ತಿತ್ತು. ಏನೋ ಯೋಚಿಸುತ್ತಿದ್ದೆ ನೀನು
ಅಂದ,
‘ಅದೇ ಕಣೋ,
ಪ್ರೆಮರಿಯಿಂದ ಇಲ್ಲಿಯವರೆಗೂ..’ ಅವನಿಗೆ
ಏನು ಅರ್ಥವಾಯ್ತೋ ಗೊತ್ತಿಲ್ಲ, ಮಾತನ್ನು ಮುಂದುವರೆಸಿದ, ಶ್ರೀ
ನಾನು ನಮ್ಮ್ ದೊಡ್ಡಪ್ಪ ಇರೋ
ವೃದ್ಧಾಶ್ರಮಕ್ಕೆ ಹೋಗಿದ್ದೆ. ಅಲ್ಲಿ ಇರೋರೆಲ್ಲ ಬಹುತೇಕ
ವೃದ್ಧರಿಗೆ ಶ್ರೀಮಂತ ಮಕ್ಕಳಿದ್ದಿದ್ದು. ಅವರೂ
ಅನಾಥರಂತೆ ಆಶ್ರಮದಲ್ಲಿ ಇರುವುದನ್ನು ನೋಡಿ ತುಂಬಾ ಬೇಸರವೂ
ಆಯಿತು. ನಾನು ಒಬ್ಬ ತಾತ
ಅವರನ್ನು ಮಾತನಾಡಿಸಿದೆ. ನೀವು ಏಕೆ ಮಕ್ಕಳಿದ್ದೂ
ಹೀಗೆ ಅನಾಥರಂತೆ ಈ ಆಶ್ರಮದಲ್ಲಿ ಇದ್ದೀರಿ?
ಎಂದಾಗ, ಆ ಆಹಿರಿಯರು ಹೇಳಿದರು,
ನಮ್ಮ ಮಕ್ಕಳ ಜೀವನ ರೂಪಿಸುವುದಕ್ಕಾಗಿ
ದುಡಿದು, ವಿದ್ಯೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿ, ಒಳ್ಳೆಯ
ವಿದ್ಯಾಭ್ಯಾಸ ಕೊಡಿಸಿದೆವು ನಿಜ! ಆದರೆ, ಈಗಿನ
ಸ್ಪರ್ಧಾತ್ಮಕ ಶಿಕ್ಷಣದಿಂದ ಅವರಿಗೆ ಹಣ ಸಂಪಾದನೆಯೇ
ಮುಖ್ಯ ಗುರಿಯಾಯಿತೇ ಹೊರತು, ಸಂಸ್ಕಾರ, ಮಾನವೀಯತೆಯನ್ನು
ಕೊಡಲೇ ಇಲ್ಲ. ವಿನಯವಂತೂ ಕಾಣಿಸಲೇ
ಇಲ್ಲ. ಹಣದ ಮೂಲ ಹುಡುಕಿಕೊಂಡು,
ದೂರದಲ್ಲೆಲ್ಲೋ ಕೆಲಸ ಮಾಡಿ, ಜೀವನ
ಸಾಗಿಸುತ್ತಿದ್ದಾರೆ. ನನ್ನನ್ನ ಈ ಇಳಿ
ವಯಸ್ಸಿನಲ್ಲಿ, ಆಸರೆ ಇಲ್ಲದ ನಮ್ಮನ್ನು
ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ನನಗೆ ಈ ನೆಲ
ಬಿಟ್ಟು, ಬೇರೆ ಸ್ಥಳದಲ್ಲಿ ಬದುಕೋದು
ಆಗೊಲ್ಲಪ್ಪ, ಅವರೇನೋ ವರ್ಷಕ್ಕೊಮ್ಮೆ ಬಂದು,
ಹಣ ಕೊಟ್ಟು ನೋಡಿಕೊಂಡು ಹೋಗ್ತಾರೆ.
ಆದರೆ,.. ಎನ್ನುತ್ತಾ ಆ ವೃದ್ಧ ವ್ಯಥೆಯಿಂದ
ಬಿಕ್ಕಿದ.
ಅಕ್ಷರಶಃ
ಸತ್ಯ ಅಲ್ಲವೇ? ನಮ್ಮ ಪೂರ್ವಜರ
ಕಾಲದಿಂದ ಬಂದ ಶಿಕ್ಷಣ ಮನೋವಿಕಾಸದ
ಕಡೆ ದಾರಿ ತೋರಿಸಿ, ಒಬ್ಬ
ಸುಸಂಸ್ಕೃತ–ಸ0ಸ್ಕಾರವ0ತನನ್ನಾಗಿ
ರೂಪುಗೊಳಿಸುತ್ತಿತ್ತು. ವಿದ್ಯಾವಂತರು, ಆದರ್ಶಪ್ರಾಯರಾಗಿ, ಸಮಾಜಕ್ಕೆ ತಮ್ಮ ಜ್ಞಾನದ ಮೂಲಕ
ನೆರವಾಗುತ್ತಿದ್ದರು. ಸ0ಬ0ಧಗಳನ್ನು ಗೌರವಿಸುತ್ತಿದ್ದರು.
ಈಗಿನ ನಮ್ಮ ಯುವ ಜನಾಂಗದ
ಮನ:ಸ್ಥಿತಿ ಮತ್ತು ಶಿಕ್ಷಣದ ಕ್ರಮ
ಬದಲಾಗಬೇಕಿದೆ. ವ್ಯಾಪಾರೀಕರಣ ನಿಲ್ಲಬೇಕು. ಶಿಕ್ಷಣ ಭಾರತ ದೇಶದ
ಪ್ರತಿಯೊಬ್ಬ ಪ್ರಜೆಯ ಹಕ್ಕಾಗುವುದ ಜೊತೆಗೆ
ಸರ್ಕಾರವೇ ಇದರ ಹೊಣೆ ಹೊರಬೇಕು.
ಖಾಸಗೀಕರಣಕ್ಕೆ ಬ್ರೇಕ್ ಬೀಳಬೇಕು, ವ್ಯಾಪಾರೀಕರಣ
ನಿಲ್ಲಿಸಬೇಕಾಗಿದೆ.
- -ಶ್ರೀಚನ್ನ