ಶಿಕ್ಷಣ ಕ್ಷೇತ್ರದಲ್ಲೊಂದು ವಿನೂತನ ಯೋಜನೆ Freeship Card ವಿದ್ಯಾರ್ಥಿಗಳಿಗೆ ವರದಾನ

ಬೆಂಗಳೂರು,  ಜುಲೈ 16 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಮಾರ್ಗಸೂಚಿ  2020-21 ರನ್ವಯ   Freeship Card  ಯೋಜನೆಯಡಿಯಲ್ಲಿ  ಎಲ್ಲಾ  ಅರ್ಹ ವಿದ್ಯಾರ್ಥಿಗಳು ಯಾವುದೇ ಶುಲ್ವ

ಪಾವತಿಸದೇ ತಮ್ಮ  ಆಯ್ಕೆಯ   ಕೋರ್ಸಗಳಿಗೆ  ಪ್ರವೇಶಾತಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.  

ಇದನ್ನು ಸಾಧಿಸಲು ಎಲ್ಲಾ ರಾಜ್ಯ ಸರ್ಕಾರಗಳು ಈ ಕೆಳಕಂಡ   ಪ್ರಕ್ರಿಯೆಯನ್ನು ಅನುಸರಿಸಿ  Freeship Card  ನ್ನು  ವಿತರಿಸಲು ಕೇಂದ್ರ ಸರ್ಕಾರವು ಸೂಚಿಸಿದೆ.  Freeship Card  ವಿತರಿಸುವಾಗ ವಿದ್ಯಾರ್ಥಿಗೆ ಶುಲ್ಕ ಮರು ಪಾವತಿ ಪಡೆದ ಕೂಡಲೇ ಅದನ್ನು ಶಿಕ್ಷಣ ಸಂಸ್ಥೆಗೆ ಪಾವತಿಸಲು ಹಾಗೂ ಈ ಬಗ್ಗೆ  ಶಿಕ್ಷಣ ಸಂಸ್ಥೆಗೆ ಮಾಹಿತಿಯನ್ನು ನೀಡಬೇಕೆಂಬ ಷರತ್ತನ್ನು ವಿಧಿಸಬೇಕಾಗಿರುತ್ತದೆ.
Freeship Card  ನಿಂದಾಗಿ ಅರ್ಹ ವಿದ್ಯಾರ್ಥಿಗೆ  ತನ್ನ ಐಚ್ಛಿಕ ಕೋರ್ಸಗಾಗಿ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಶುಲ್ಕರಹಿತವಾಗಿ ಷರತ್ತುಬದ್ಧ ಪ್ರವೇಶಾತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.
ಯಾವುದೇ ಕೋರ್ಸ್ಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗೂ ಪ್ರವೇಶಾತಿಯ ದಿನಾಂಕಕ್ಕೂ ಮೊದಲೇ ರಾಜ್ಯದ ವಿದ್ಯಾರ್ಥಿ ವೇತನ ವಿತರಣಾ ಪೋರ್ಟಲ್ ನಲ್ಲಿ ತನ್ನ ಆಧಾರ್ ಸಂಖ್ಯೆ  ಹಾಗೂ  ತಾನು ಇಚ್ಛಿಸುವ   ಕೋರ್ಸ್ನ ವಿವರಗಳನ್ನು ಸಲ್ಲಿಸಿ   Freeship Card  ಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಹಾಗೂ ಶುಲ್ಕ ಮರುಪಾವತಿ ಪಡೆದ 7 ದಿನಗಳೊಳಗಾಗಿ  ತಾನು ಶಿಕ್ಷಣ ಸಂಸ್ಥೆಗೆ ಶುಲ್ಕವನ್ನು ಪಾವತಿಸುವ ಬಗ್ಗೆ ಪ್ರಮಾಣ ಪತ್ರ ನೀಡಬೇಕಾಗಿರುತ್ತದೆ.
ಈ ರೀತಿ  Freeship Card ಗೆ  ಕೋರಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು  ಪಡೆಯಲು ರಾಜ್ಯ ಸರ್ಕಾರಗಳು  ವರ್ಷ ಪೂರ್ತಿ ತಮ್ಮ ಪೋರ್ಟಲ್ ನಲ್ಲಿ ಅವಕಾಶ ಕಲ್ಪಿಸಬೇಕಾಗಿರುತ್ತದೆ.
 ಜಾತಿ, ಆಧಾಯ ಪ್ರಮಾಣ ಪತ್ರಗಳು  ಹಾಗು ಶೈಕ್ಷಣಿಕ ದಾಖಲೆಗಳನ್ನು ಪರಿಶೀಲನೆ ಮಾಡಲು ದತ್ತಾಂಶ ಆಧಾರಿತ ತಾಂತ್ರಿಕ ಪರಿಶೀಲನಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಕಡ್ಡಾಯ ಸೂಚನೆಗಳನ್ನು ನೀಡುತ್ತಾ ಕೇಂದ್ರ ಸರ್ಕಾರವು ಸದರಿ ಪ್ರಕ್ರಿಯೆಯನ್ನು  ಕಾಗದರಹಿತ ವ್ಯವಸ್ಥೆಯನ್ನಾಗಿ  ಮಾಡಬೇಕೆಂದು ಆದೇಶ ನೀಡಿರುತ್ತದೆ. Freeship Card  ನ್ನು ವಿದ್ಯಾರ್ಥಿಯು ರಾಜ್ಯ ಸರ್ಕಾರದ ಪೋರ್ಟಲ್ ನಿಂದ  down load ಮಾಡಿಕೊಳ್ಳಲು ಅವಕಾಶ ನೀಡುವುದು ಕಡ್ಡಾಯವಾಗಿರುತ್ತದೆ.
ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ  ರಾಜ್ಯ ಸರ್ಕಾರವು ತಮ್ಮ ತಂತ್ರಾಂಶದ ಮೂಲಕ ವಿದ್ಯಾರ್ಥಿಗೆ  Freeship Card  ನ್ನು ವಿತರಿಸಲು ಅದೇಶ ನೀಡಿರುತ್ತದೆ.
ಒಬ್ಬ ಅರ್ಹ ವಿದ್ಯಾರ್ಥಿಯು  ಶುಲ್ಕವನ್ನು ಪಾವತಿಸಲು ವಿಳಂಬವಾಗುವ ಏಕೈಕ ಕಾರಣಕ್ಕಾಗಿ ತಾನು ಇಚ್ಛಿಸಿದ ಕೋರ್ಸ್ಗೆ ಪ್ರವೇಶಾತಿಯನ್ನು ಪಡೆಯದೆ ಇರುವಂತಾಗುವ ಪರಿಸ್ಥಿತಿಯನ್ನು ತಪ್ಪಿಸಲು   Freeship Card   ಅನ್ನು ಅನುಷ್ಠಾನಗೊಳಿಸುವುದು ಕಡ್ಡಾಯವಾಗಿರುತ್ತದೆ.
Freeship Card   ಒಂದು ವರ್ಷದ ಅವಧಿಗೆ ಮಾನ್ಯತೆ ಹೊಂದಿರುತ್ತದೆ. ವಿದ್ಯಾರ್ಥಿಯು ತನ್ನ ಕೋರ್ಸ್ ಅನ್ನು ಬದಲಾಯಿಸಲು ಇಚ್ಛಿಸಿದರೂ ಸಹ ಸದರಿ ತಂತ್ರಾಂಶದಲ್ಲಿ ಹೊಸ ಪರಿಷ್ಕೃತ  Freeship Card  ನ್ನು ವಿತರಿಸಲು ಅವಕಾಶ ನೀಡಬೇಕಾಗಿರುತ್ತದೆ.

Leave a Reply

Your email address will not be published. Required fields are marked *