ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ.ಕೆ. ಖಡಬಡಿ ನಿಧನ

ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಜಿ.ಕೆ. ಖಡಬಡಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಉಸಿರಾಟದ ತೊಂದರೆಯಿಂದ ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾದರು.
 ಬಳ್ಳಾರಿ ಕೊಟ್ಟೂರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿ ನಂತರ ಬೆಳಗಾವಿಯ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಪ್ರಾರಂಭಿಕ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು.
ಸದಾ ಕ್ರಿಯಾಶೀಲರಾದ  ಪ್ರೊ. ಜಿ.ಕೆ. ಕಡಬಡಿಯವರು ಪರಿಸರ ಮಿತ್ರ ಸಂಘ ಕಟ್ಟಿ ಪರಿಸರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಶಿಕ್ಷಣತಜ್ಞ ರಾಗಿ ಪರಿಸರ ಪ್ರೇಮಿಯಾಗಿ. ಲೇಖಕರಾಗಿ, ಉತ್ತಮ ಆಡಳಿತಗಾರರಾಗಿ  ಶಿಕ್ಷಕರನ್ನು ರೂಪಿಸುವ ಶಿಲ್ಪಿಯಾಗಿ ತಮ್ಮನ್ನು ಗುರುತಿಸಿಕೊಂಡವರು.
ಇತ್ತಿಚೆಗೆ ಪರಿಸರ ಪ್ರಜ್ಞೆ, ಪರಿಸರ ಗೀತೆಗಳು ಎನ್ನುವ 2 ಪುಸ್ತಕಗಳನ್ನು ಬಿಡುಗಡೆ ಗೊಳಿಸಿದ್ದರು.  ಕ.ಸಾ.ಪ ಲಾಕ್ ಡೌನ್ ಉಪನ್ಯಾಸ ಮಾಲಿಕೆಯಲ್ಲಿ ಪರಿಸರದ ಕುರಿತು ಉಪನ್ಯಾಸ ನೀಡಿದ್ದರು.
ಕ್ರಿಯಾಶೀಲ, ಶಿಕ್ಷಣತಜ್ಞ   ಪ್ರೊ. ಜಿ.ಕೆ. ಕಡಬಡಿಯವರು ಪರಿಸರ ಮಿತ್ರ ಸಂಘ ಕಟ್ಟಿ ಪರಿಸರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.

Leave a Reply

Your email address will not be published. Required fields are marked *