ಅಂತಿಮ ಆಯ್ಕೆಪಟ್ಟಿ ಪ್ರಕಟ

ಬೆಂಗಳೂರು, ಆಗಸ್ಟ್ 07 ( ಕರ್ನಾಟಕ ವಾರ್ತೆ ) : ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಧಿಸೂಚಿಸಲಾದ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಳ ಸಂಬಂಧ ಅಂತಿಮ ಆಯ್ಕೆ ಪಟ್ಟಿ ಹಾಗೂ ಕಟ್‍ಆಫ್ ಅಂಕಗಳನ್ನು ಆಗಸ್ಟ್ 6, 2021 ರಂದು ಆಯೋಗದ ವೆಬ್‍ಸೈಟ್ ವಿಳಾಸ:  http://kpsc.kar.nic.in/lists ನಲ್ಲಿ ಪ್ರಕಟಿಸಲಾಗಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಗಣಿತ ಶಿಕ್ಷಕರು (ಉಳಿಕೆ ಮೂಲ ವೃಂದ 29+09 ಹೈ.ಕ) (ಗ್ರೂಪ್-ಸಿ) 38 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜುಗಳಲ್ಲಿನ ನಿಯಮಪಾಲಕರು (ಮಹಿಳೆ) (ಉಳಿಕೆ ಮೂಲ ವೃಂದ 09+03 ಹೈ.ಕ) (ಗ್ರೂಪ್-ಸಿ) 12 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ನಿಯಮಪಾಲಕರು (ಪುರುಷ) (ಉಳಿಕೆ ಮೂಲ ವೃಂದ 21+5 ಹೈ.ಕ) (ಗ್ರೂಪ್-ಸಿ) 26 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ನಿಯಮಪಾಲಕರು (ಮಹಿಳೆ) (ಉಳಿಕೆ ಮೂಲ ವೃಂದ 32+5 ಹೈ.ಕ) (ಗ್ರೂಪ್-ಸಿ) 37 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ಲೆಕ್ಕಸಹಾಯಕರು (ಉಳಿಕೆ ಮೂಲ ವೃಂದ 15+3 ಹೈ.ಕ) (ಗ್ರೂಪ್-ಸಿ) 18 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂದು  ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *