ಅನಿಕೇತನ ಚಂದಾದಾರ ಅಭಿಯಾನ

ಬೆಂಗಳೂರು, ಆಗಸ್ಟ್ 07 ( ಕರ್ನಾಟಕ ವಾರ್ತೆ ) :  ಸಾಹಿತ್ಯ ಕ್ಷೇತ್ರದ ಎಲ್ಲಾ ಓದುಗ ಬಂಧುಗಳಿಗೂ ಮೌಲ್ಯಯುತವಾದ ಸಾಹಿತ್ಯ ವಿಚಾರಗಳನ್ನು ತಲುಪಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅನಿಕೇತನ ಚಂದಾದಾರ ಅಭಿಯಾನವನ್ನು ಹಮ್ಮಿಕೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅನಿಕೇತನವನ್ನು 1984ರಿಂದ ಕನ್ನಡದಲ್ಲಿ ಪ್ರಾರಂಭಿಸಿ, ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದುಕೊಂಡಿರುವುದು ವಿಶೇಷ. ಯು.ಜಿ.ಸಿಯಿಂದ ಅನುಮೋದನೆ ಪಡೆದ ಕನ್ನಡದ ಕೆಲವೇ ಪತ್ರಿಕೆಗಳಲ್ಲಿ ಅನಿಕೇತನವೂ ಒಂದು ಎಂಬುದು ಸಂತಸದ ವಿಷಯವಾಗಿದೆ. ಅನುವಾದಕ್ಕೆ ಮೀಸಲಾಗಿದ್ದ ಕನ್ನಡ ಅನಿಕೇತನದ ಸ್ವರೂಪವನ್ನು ಮಾರ್ಪಡಿಸಿ ಎಲ್ಲಾ ಸಾಹಿತ್ಯಾಸಕ್ತರಿಗೂ ಅನುಕೂಲವಾಗುವಂತಹ ಲೇಖನಗಳನ್ನು ಪ್ರಕಟಿಸುತ್ತಾ ಬರುತ್ತಿದೆ. ಅನಿಕೇತನಕ್ಕೆ ಚಂದಾದಾರರಾಗ ಬಯಸುವವರು ಅಕಾಡೆಮಿಯ ವೆಬ್‍ಸೈಟ್ ವಿಳಾಸ: www.karnatakasahithyaacademy.org      ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *