ಪ್ರೌಢಶಾಲಾ ಶಿಕ್ಷಕರಿಗಾಗಿ ಆನ್‍ಲೈನ್ ಕಾರ್ಯಾಗಾರ

ಬೆಂಗಳೂರು, ಆಗಸ್ಟ್ 11 (ಕರ್ನಾಟಕ ವಾರ್ತೆ):ಜವಹರ್ ಲಾಲ್ ನೆಹರು ತಾರಾಲಯವು ಪ್ರೌಢಶಾಲಾ ಶಿಕ್ಷಕರಿಗಾಗಿ ಆಗಸ್ಟ್ 18 ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ  ಮೈಕ್ರೋಸಾಫ್ಟ್ ಟೀಮ್ಸ್ ಮೂಲಕ ಆನ್‍ಲೈನ್ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪ್ರಸ್ತುತ ಕಾರ್ಯಾಗಾರದಲ್ಲಿ “ಶಬ್ಧ” ಎಂಬ ವಿಷಯದ ಕುರಿತು ತರಗತಿಗಳಲ್ಲಿನ ಬೋಧನೆಗೆ ಉಪಯುಕ್ತವಾಗುವಂತಹ ಪ್ರಾತ್ಯಕ್ಷಿಕೆಗಳ ಮೂಲಕ ಚರ್ಚಿಸಲಾಗುವುದು. ಅಭ್ಯರ್ಥಿಗಳ ಸಂಖ್ಯೆಯನ್ನು 30ಕ್ಕೆ ನಿಗಧಿಪಡಿಸಲಾಗಿದ್ದು, ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಬುಕ್ ಮೈ ಶೋ ಜಾಲತಾಣದ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಕಮ್ಮಟದಲ್ಲಿ ಇಯರ್‍ಫೋನ್ ಅಥವಾ ಹೆಡ್‍ಫೋನ್ ಬಳಕೆಯು ಬಹಳ ಉಪಯುಕ್ತವಾಗಬಹುದು.    
ಕಾರ್ಯಾಗಾರದ ಆನ್‍ಲೈನ್ ಲಿಂಕ್:  https://in.bookmyshow.com/bengaluru/events/sound/ET00313791
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 22379725/22266084 ಹಾಗೂ ವೆಬ್‍ಸೈಟ್ ವಿಳಾಸ: info@taralaya.org  ಅಥವಾ        www.taralaya.org      ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *