ಮಂಗಳಮುಖಿಯರೊಂದಿಗೆ ರಕ್ಷಾ ಬಂಧನ ಆಚರಿಸಿದ ಶಿಕ್ಷಣ ತಜ್ಞ ಡಾ ವಿನಯ್

 ಮಂಗಳಮುಖಿಯರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದ ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ ಡಾ ವಿನಯ್

 ಪ್ರಖ್ಯಾತ ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ ಡಾ.ವಿನಯ್ ಅವರು ಮಂಗಳಮುಖಿಯರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸುವ ಮೂಲಕ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿಕೊಂಡರು.

ಡಾ ವಿನಯ್ ಗೆ ರಾಖಿ ಕಟ್ಟಿದ  ಮಂಗಳಮುಖಿಯರು ಅವರ ಈ ವಿಶಿಷ್ಟ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುವದರ ಜೊತೆಗೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.

ನಂತರ ಮಾತನಾಡಿದ ಡಾ. ವಿನಯ್, “ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯ ನಡುವಿನ ಸುಂದರ ಸಂಬಂಧವಾಗಿದೆ. ಸಮಾಜದಲ್ಲಿ ಆಗಾಗ್ಗೆ ತಪ್ಪಾಗಿ ಗ್ರಹಿಸಲ್ಪಟ್ಟ ಮಂಗಳಮುಖಿಗಳೊಂದಿಗೆ ನಿಲ್ಲುವ ಸಮಯ ಬಂದಿದೆ.‌ ಅವರನ್ನು ನಮ್ಮೊಳಗಿನೊಬ್ಬರಂತೆ ನಡೆಸಿಕೊಳ್ಳಬೇಕು. ನಾವು ಅವರಿಗೆ ಸಮಾಜದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸಬೇಕಾಗಿದೆ. ಅವರಲ್ಲಿಯೂ ಅನೇಕರು ಅತ್ಯಂತ ಪ್ರತಿಭಾವಂತರಿದ್ದಾರೆ. ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.


Leave a Reply

Your email address will not be published. Required fields are marked *