ಲಿಂಗಸುಗೂರು : 9 ಮತ್ತು 10ನೇ ತರಗತಿ ಶುರು

ಲಿಂಗಸಗೂರು ತಾಲ್ಲೂಕಿನಾದ್ಯಂತ  ಪ್ರೌಢಶಾಲೆಗಳ 9 ಮತ್ತು10ನೇ ತರಗತಿಗಳು ಪ್ರಾರಂಭವಾಗಲಿದ್ದು,ಶಾಲಾ ವ್ಯಾಪ್ತಿಯ ಜನಪ್ರತಿನಿಧಿಗಳು, ಲಿಂಗಸಗೂರು ಶಾಸಕ ಡಿ.ಎಸ್. ಹೋಲಿಗೇರಿ ಅವರು ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಶಾಲಾ ಎಸ್ ಡಿಎಂಸಿ ಮಂಡಳಿಯ ಸಹಯೋಗದಲ್ಲಿ ವಿದ್ಯಾರ್ಥಿಗಳ ಪಾಲಕರ ಜತೆಗೆ ಶಾಲೆ ಪ್ರಾರಂಭಿಸಲು ರಾಜ್ಯ ಸರ್ಕಾರದ ಕೋವಿಡ ನಿಯಾಮವಳಿಗಳನುಸಾರ ನೆರವೇರಿಸಲಾಗುವುದು ಎಂದು ಲಿಂಗಸುಗೂರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಥೋಡ್ ತಿಳಿಸಿದ್ದಾರೆ.

ಶಾಲೆಯ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿದೆ.

Leave a Reply

Your email address will not be published. Required fields are marked *