ಮನೆಪಾಠ-ಭಾರತದಲ್ಲಿ ಅವಶ್ಯಕ

 ಭಾರತದಲ್ಲಿ ಶೈಕ್ಷಣಿಕ ಪಧ್ಧತಿ

ಪ್ರಸ್ತ್ತುತ ಭಾರತದಲ್ಲಿನ ಇಂದಿನ ಶೈಕ್ಷಣಿಕ ಪಧ್ಧತಿಯು ವಿದ್ಯಾರ್ಥಿಗಳಿಂದ ಅತ್ಯುತ್ತಮವಾದ ಹಾಗೂ ಹೆಚ್ಚಿನ ಪರಿಶ್ರಮವನ್ನು ಬಯಸುತ್ತದೆ. ಹಾಗೂ ಶಿಕ್ಷಕರು ಎಷ್ಡೇ ಓದಿದ್ದರೂ ಹಾಗೂ ತರಬೇತಿ ಪಡೆದಿದ್ದರೂ ವೃತ್ತಿಯಲ್ಲಿ ಅನುಭವಸ್ಥರಾಗಿದ್ದರೂ ವಿದ್ಯಾರ್ಥಿಗಳ ಪ್ರಾಮಾಣಿಕ ಪ್ರಯತ್ನ ಇಂದಿನ ಶಿಕ್ಷಣ ಪದ್ದತಿಗೆ ಅವಶ್ಯಕವಾಗಿದೆ. ಇದಕ್ಕೆ ಕಾರಣ ಕ್ರಮವಾಗಿಲ್ಲದ ಶಿಕ್ಷಕ ಹಾಗೂ ವಿದ್ಯಾಥಿರ್Àಗಳ ಅನುಪಾತ. ಈ ವಿಚಿತ್ರವಾದ ಅನುಪಾತದಿಂದಾಗಿ ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳ ಮೇಲೆ ಗಮನ ಕೇಂದ್ರೀಕರಿಸಲು ದುರ್ಬರವೆನ್ನಿಸುತ್ತಿದೆ. ಈ ಅನುಪಾತವು ಶಾಲೆಯಿಂದ ಶಾಲೆಯಿಂದ ಕಾಲೇÉಜಿಗೆ ಬೇರೆಯಾಗಿರುತ್ತದೆ.ಅನುಪಾತದಲ್ಲಿ ಹೆಚ್ಚಿನ ವ್ಯತಾÀ್ಯಸವಿದ್ದರೆ ಆ ಶಾಲೆಯ ಶಿಕ್ಷಣದ ಗುಣಮಟ್ಟ ಕಡಿಮೆಯದ್ದಾಗಿರುತ್ತದೆ. ರೇಟಿಂಗ್ ಪ್ರಕಾರ ಈ ಅನುಪಾತ ವಿದ್ಯಾರ್ಥಿಗೆ ಹಾಗೂ ಶಿಕ್ಷಕರಿಗೆ ಇರುವುದು 30:1. ಆದರೆ ತೋರಿಕೆಯಂತೆ ಈ ಅನುಪಾತ ಪಾಲಿಸಲ್ಪ್ಲಡುತ್ತಿಲ್ಲ.  ಒಂದೇ ನಗರದಲ್ಲಿ ಈ ಅನುಪಾತವು 40;1 ರಿಂದ 60:1 ವರೆಗೂ

ವ್ಯತ್ಯಾಸವಿರುತ್ತದೆ. ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿರುವ ಅನುಪಾತದಲ್ಲಿ ಹೆಚ್ಚಿನ ವ್ಯತ್ಯಾಸವಿರುತ್ತದೆ. ಅನುಪಾತದಲ್ಲಿರುವ ಈ ವ್ಯತ್ಯಾಸವು ನಮ್ಮ ಸಮಾಜದ ಇಂದಿನ ಶಿಕ್ಷಣದ ಪದ್ದತಿಯ ಪರಿಸ್ಥಿತಿಯನ್ನು ಎತ್ತಿಹಿಡಿಯುತ್ತದೆ. ಹಾಗಾಗಿ ಈ ಸ್ವರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಖಾಸಗಿ ತರಬೇತಿ ಕೇಂದ್ರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಹೀಗೆ ಖಾಸಗಿ ಪಾಠವು ಶಾಲಾಶಕ್ಷಣದ ಮುಂದುವರಿದ ಭಾಗದಂತೆ ಸಮಾಜದಲ್ಲಿ ಸ್ವೀಕರಿಸಲ್ಲಟ್ಟಿದೆ.

By: 

Radhika G N
7019990492

———————————————————

Leave a Reply

Your email address will not be published. Required fields are marked *