ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ N.ನಾಗರಾಜ್

 *ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ N.ನಾಗರಾಜ್*

ನಮ್ಮ ಜನ ರಕ್ಷಕ ಪತ್ರಿಕಾ ಬಳಗ ಹಾಗೂ ಯುಟ್ಯೂಬ್ ಚಾನಲ್ ವಾರ್ತಾ ಜಾಲ ಪತ್ರಿಕಾ ಬಳಗ ನಿರೀಕ್ಷೆಯ ಫಲಶ್ರುತಿ ಈ ದಿನ ಕಂಡಿದೆ ನಮ್ಮ ಗಡಿನಾಡಿನ ಚಾಕವೇಲು ಗ್ರಾಮ ಪಂಚಾಯಿತಿಯ 24 ಗಂಟೆ ಕಣ್ಣುಮುಂದೆ ನೋಡುತ್ತಿರುವ ಘಟನಾವಳಿಗಳ ಬಗ್ಗೆ ಯೋಚಿಸುತ್ತಾ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾದ ನಾನು ನೀವು ಶಾಲೆಯ ಮುಖ್ಯ ಶಿಕ್ಷಕನಾದಾಗನಿಂದಲೂ ಅಂದರೆ ನಾಗರಾಜ ರಾದ ತಮ್ಮ ನಡವಳಿಗಳನ್ನು ಗಮನಿಸುತ್ತಾ ಶಾಲೆಯ ಅಭಿವೃದ್ಧಿಗೆ ಯಾವ ರೀತಿ ಒತ್ತು ಕೊಡುತ್ತಿದ್ದೀರಿ ಗ್ರಾಮಾಂತರ ಸಣ್ಣಸಣ್ಣ ಹಳ್ಳಿಗಳ ಮಕ್ಕಳಿಗೆ ಯಾವ ರೀತಿ ಅರಿವು ಮೂಡಿಸುತ್ತಾ ಮತ್ತು ವಿದ್ಯಾರ್ಥಿಗಳ ಪೋಷಕರ ಕಾಳಜಿ ವಹಿಸಿ ಅವರ ಮನಸ್ಸು ಯಾವ ರೀತಿ ಗೆಲ್ಲುತ್ತಿದ್ದೀರಿ ಹಿಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ದಾಖಲೆಗಳು ಮತ್ತು ಈ ವರ್ಷದ ವಿದ್ಯಾರ್ಥಿಗಳು ದಾಖಲಾತಿ ಗಳು ಯಾವ ರೀತಿ ಏರಿಕೆಯಾಗಿದೆ ಮತ್ತು ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆದು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುತ್ತಾ ಮತ್ತು ಸರ್ಕಾರದ ಸವಲತ್ತುಗಳು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮನಮುಟ್ಟುವಂತೆ ಹೇಳಿ ಈ ದಿನ ಚಾಕವೇಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ದಾಖಲಾತಿಗಳು ತಾಲೂಕಿನಲ್ಲೇ ಮೊಟ್ಟ ಮೊದಲ ಸ್ಥಾನದಲ್ಲಿರುವ ಸರ್ಕಾರಿ ಶಾಲೆ ಎಂದು ನಮ್ಮ ತಾಲ್ಲೂಕಿನಲ್ಲೇ ಒಳ್ಳೆಯ ಹೆಸರು ಬರುವಂತೆ ಮಾಡಿದಿರಿ ಪ್ರಾಮಾಣಿಕ ಪಾರದರ್ಶಕವಾಗಿ ಆಡಳಿತವನ್ನು ನಡೆಸುತ್ತಾ ಜನಸಾಮಾನ್ಯರ ಊರಿನ ಮುಖಂಡರು ಮತ್ತು SDMC ಸಮಿತಿಯ ಮತ್ತು ಅಧ್ಯಕ್ಷರ ಎಲ್ಲರ ಸಹಕಾರಗಳನ್ನು ಪಡೆಯುತ್ತಾ ಶಾಲೆಯು ಉತ್ತುಂಗಕ್ಕೇರಲು ಎಲ್ಲಾ ಕೋನಗಳಲ್ಲಿ ಪ್ರಯತ್ನ ಪಟ್ಟು ಯಶಸ್ವಿ ಕಾಣರುವುದೇ ನೀವು ಉತ್ತಮ ಶಿಕ್ಷಕರಾಗಿ ಆಯ್ಕೆಯಾಗಿರುವ ಸಂಗತಿ ನಿಮಗೂ ನಿಮ್ಮ ಶಾಲೆಯ ಸಹಶಿಕ್ಷಕರು ಮತ್ತು ಎಲ್ಲ ವಿದ್ಯಾರ್ಥಿಗಳಿಗೂ ನಮ್ಮ ಪತ್ರಿಕಾ ಪರವಾಗಿ ಶುಭಾಶಯಗಳು ನಮ್ಮ ಕನಸನ್ನು ನನಸು ಮಾಡಿದ ನಿಮಗೆ ಅನಂತ ಅನಂತ ನಮನಗಳು. ಇನ್ನು ಮುಂದಿನ ದಿನಗಳಲ್ಲಿ ನಿಮ್ಮ ಸೇವೆ ಯು ಈ ಶಾಲೆಗೆ ಕೊಡುಗೆಯಾಗಿ ದುಡಿಯುತ್ತೀರಿ ಎಂದು ನಂಬಿರುತ್ತೇವೆ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಉತ್ತುಂಗಕ್ಕೇರುತ್ತಾರೆಂದು ನಮ್ಮನಂಬಿಕೆ  ಇನ್ನೂ ನಮ್ಮ ಚಾಕವೇಲು ಪಂಚಾಯಿತಿಯ ಎಲ್ಲಾ ಮುಖಂಡರು ಜನಸಾಮಾನ್ಯರು ಶಾಲೆಯ ಅಭಿವೃದ್ಧಿಗೆ ಸಹಾಯ ಹಸ್ತನೀಡಲಿ ಎಂದು ಕೋರುತ್ತೇವೆ.

Leave a Reply

Your email address will not be published. Required fields are marked *