ವಿಪ್ರ ಪೋಟೋ ಮತ್ತು ವೀಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಶಿಕ್ಷಕರ ದಿನಾಚರಣೆ
ರಾಜರಾಜೇಶ್ವರಿನಗರದಲ್ಲಿ ಕರ್ನಾಟಕ ರಾಜ್ಯ ವಿಪ್ರ ಪೋಟೋ ಮತ್ತು ವೀಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಣ ,ಯೋಗ ಮತ್ತು ನೃತ್ಯ
ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ, ಶಿಕ್ಷಕಿಯರಿಗೆ ಗೌರವಿಸಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು .
ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಅಧ್ಯಕ್ಷರಾದ ಬಿ.ಕೆ.ರಮೇಶ್ ರವರು ಶ್ರೀ ಯೋಗ ಹಾಗೂ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಮತಿ ಬಿ.ಕೆ.ರಮೇಶ್ ರವರು ಶಿಕ್ಷಕ ವೃಂದದವರು ಉದ್ಘಾಟನೆ ಮಾಡಿದರು.
ಬಿ.ಕೆ.ರಮೇಶ್ ರವರು ಮನೆಯೆ ಮೊದಲ ಪಾಠ ಶಾಲೆ ,ಜೀವನದ ಮೊದಲನೇಯ ಗುರುವಾಗಿ ತಾಯಿ ನಮ್ಮ ಜೀವನ ರೂಪಿಸುತ್ತಾಳೆ .ನಂತರ ಶಾಲೆ ,ಕಾಲೇಜಿನ ಶಿಕ್ಷಕರ ಮಾರ್ಗದರ್ಶನ ಉತ್ತಮ
ಪ್ರಜೆಯಾಗಿ ರೂಪಗೊಳ್ಳಲು ನಮ್ಮ ಉತ್ತಮ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಗುರುವೆ ಸಾಕ್ಷತ್ ಶಿಕ್ಷಕರು .
ದೇವರು ಮತ್ತು ಭಕ್ತರ ನಡುವೆ ಗುರುವು ಸೇತುವೆಯಾಗಿ ನಿಲ್ಲುವುದು ಗುರು .ನಮ್ಮ ಪಾಪದ, ಪುಣ್ಯದ ಕೆಲಸವನ್ನು ದೇವರಿಗೆ ಒಪ್ಪಿಸುತ್ತಾರೆ ಎಂದು ಹಿಂದೂ ಸಂಪ್ರಾದಯದಲ್ಲಿ ಇದೆ. ಉಪರಾಷ್ಟಪತಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಸರ್ವಪಲ್ಲಿ ರಾಧಕೃಷ್ಣನ್ ರವರು ಹುಟ್ಟುಹಬ್ಬದ ದಿನಾವನ್ನು ಶಿಕ್ಷಕರ ದಿನಾಚರಣೆ ಅಚರಿಸುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತೆ ಎಂದರು.
Prati akshravannu heli kottu,anubhavada Paata helikottu indigu nannannu aashirvadisuttiruva nanna Ella gurugalige abhivandanegalu