ವನ್ಯಪ್ರಾಣಿ ಸಪ್ತಾಹದ ಛಾಯಾಗ್ರಹಣ ಸ್ಪರ್ಧೆ ಮತ್ತು ಛಾಯಾಚಿತ್ರಗಳ ಪ್ರದರ್ಶನ

ಬೆಂಗಳೂರು, ಸೆಪ್ಟೆಂಬರ್ 13, (ಕರ್ನಾಟಕ ವಾರ್ತೆ):

ಮೈಸೂರು ಮೃಗಾಲಯವು ದಿನಾಂಕ 1ರಿಂದ 7ನೇ ಅಕ್ಟೋಬರ್ 2021ರ ವರೆಗೆ ಆಚರಿಸಲಿರುವ ವನ್ಯ ಪ್ರಾಣಿ ಸಪ್ತಾಹದ ಅಂಗವಾಗಿ ವನ್ಯಪ್ರಾಣಿ ಛಾಯಾಗ್ರಹಣ ಸ್ಪರ್ಧೆ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ವನ್ಯಜೀವಿ ಪ್ರವರ್ಗ ಹಾಗೂ ಮೃಗಾಲಯ ಪ್ರವರ್ಗ ಎಂಬ ಎರಡು ಪ್ರವರ್ಗಗಳಲ್ಲಿ ಹಮ್ಮಿಕೊಂಡಿದೆ.

ಪ್ರತಿ ಪ್ರವರ್ಗಕ್ಕೆ ಮೌಂಟ್ ಮಾಡಿರುವ 12” ಘಿ 18” ಅಳತೆಯ ತಲಾ 2 ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಅಂಗೀಕರಿಸಲಾಗುವುದು. ಸ್ಪರ್ಧೆಯ ಪ್ರತಿ ಪ್ರವರ್ಗಕ್ಕೆ ಪ್ರವೇಶ ಶುಲ್ಕ ರೂ 100-00(ರೂಪಾಯಿ ಒಂದು ನೂರು ಮಾತ್ರ) ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಪ್ರವರ್ಗಕ್ಕೆ 3 ನಗದು ಬಹುಮಾನಗಳು ಮತ್ತು 4 ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಈ ಹಿಂದೆ ಮೈಸೂರು ಮೃಗಾಲಯದಲ್ಲಿ ಪ್ರದರ್ಶಿಸಲಾದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಅಂಗೀಕರಿಸಲಾಗುವುದಿಲ್ಲ. ಪ್ರವೇಶಗಳನ್ನು ಸ್ವೀಕರಿಸಲು ಸೆಪ್ಟೆಂಬರ್ 22, 2021 ಕೊನೆಯ ದಿನವಾಗಿದ್ದು, ಸೆಪ್ಟೆಂಬರ್ 26ರಂದು ಬಹುಮಾನಿತರನ್ನು ಆಯ್ಕೆ ಮಾಡಲಾಗುವುದು. ಛಾಯಾಚಿತ್ರ ಪ್ರದರ್ಶನವನ್ನು ಅಕ್ಟೋಬರ್ 1ರಿಂದ 7ರ ವರೆಗೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2440752 ಅಥವಾ ಮೊಬೈಲ್ ಸಂಖ್ಯೆ 9686668099ಗೆ ಕರೆ ಮಾಡಲು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *