ಬೆಂಗಳೂರಿನ ಶಾರ್ವರಿ ಪ್ರತಿಷ್ಠಾನ ಮತ್ತು ಭಾರತೀಯ ರೆಡ್ ಕ್ರಾಸ್ ಸೋಸೈಟಿಯ ಸಹಯೋಗದೊಂದಿಗೆ ಬೆಂಗಳೂರಿನ ವಿಜಯನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೆ. 12ರಂದು ಆಯೋಜಿಸಿದ್ದ ‘ ಬೃಹತ್ ರಕ್ತದಾನ ಶಿಬಿರ’ದಲ್ಲಿ ಒಟ್ಟು 65 ಯೂನಿಟ್ ರಕ್ತವು ಸಂಗ್ರಹವಾಗಿದೆ. ರಕ್ತದಾನ ಶಿಬಿರದಲ್ಲಿ ದಾನಿಯೊಬ್ಬರು ರಕ್ತದಾನ ಮಾಡುತ್ತಿದ್ದಾರೆ. ಮುಖ್ಯ ಅಥಿತಿಗಳಾಗಿ ಡಾ!! ಪಿ. ಆರ್. ಎಸ್. ಚೇತನ್ ರವರು,ಹೆಚ್ಚುವರಿ ಮುಖ್ಯ ಅಧಿಕಾರಿಗಳು,ಕರ್ನಾಟಕ ಪೌರ ರಕ್ಷಣಾ ದಳ ನವೀನ್ ಕುಮಾರ್ ಸಿ.ಆರ್ ರವರು, ಉಪ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರ್ವರಿ ಪ್ರತಿಷ್ಠಾನದ ಅಧ್ಯಕ್ಷರಾದ ರಘು ಕೃಷ್ಣಪ್ಪ ರವರು ವಹಿಸಿಕೊಂಡಿದ್ದರು