AIMSS ವತಿಯಿಂದ ಈಶ್ವರ್ ಚಂದ್ರ ವಿದ್ಯಾಸಾಗರ್ ರವರ 201ನೇ ಜನ್ಮದಿನಾಚರಣೆ

ಬಳ್ಳಾರಿ ಸೆ 26. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ AIMSS ವತಿಯಿಂದ ಈಶ್ವರ್ ಚಂದ್ರ ವಿದ್ಯಾಸಾಗರ್ ರವರ 201ನೇ ಜನ್ಮದಿನವನ್ನು ಸಂಘಟನೆಯ ಜಿಲ್ಲಾ ಕಚೇರಿಯಲ್ಲಿ ವಿದ್ಯಾಸಾಗರ್ ರವರಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು .

ಈ ಸಂದರ್ಭದಲ್ಲಿ AIMSSನ ಜಿಲ್ಲಾಧ್ಯಕ್ಷ ಎ. ಶಾಂತಾರವರು ಮಾತನಾಡಿ ಮಹಿಳಾ ಶಿಕ್ಷಣಕ್ಕಾಗಿ ಧ್ವನಿ ಎತ್ತಿದ ಮಹಾನ್ ವ್ಯಕ್ತಿ ವಿದ್ಯಾಸಾಗರ್ ರವರು ಹಾಗೆಯೆ ಹಲವಾರು ಸಂಪ್ರಾದಾಯಗಳ ವಿರುದ್ಧ ಹೋರಾಡಿದರು, ಮಹಿಳೆಯರ ವಿಧವಾ ಪುನರ್ ವಿವಾಹಕ್ಕಾಗಿ ಹೋರಾಡಿ ಕಾನೂನು ಜಾರಿಗೊಳಿಸಲು ಹೋರಾಡಿದಂತವರು ಮಹಾನ್ ಧೀಮ0ತ ಹೋರಾಟಗಾರರು .ಇಂತಹ ಮಹಾನ್ ವ್ಯಕ್ತಿ ವಿದ್ಯಾಸಾಗರ್ ರವರನ್ನು ಪ್ರಸ್ತುತ ವ್ಯವಸ್ಥೆ ಯಲ್ಲಿ ನಾವೆಲ್ಲರೂ ಸ್ಮರಿಸಬೇಕಾಗಿದೆ ಎ0ದು ತಿಳಿಸಿದರು .ಈ ಸಂದರ್ಭದಲ್ಲಿ AIMSS  ನ ಪದಾಧಿಕಾರಿಗಳಾದ ರೇಖಾ ವಿಧ್ಯಾ ವಿಜಯಲಕ್ಷ್ಮಿ ಅಹಲ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *