ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪೌರತ್ವ ತರಬೇತಿ ಶಿಬಿರ

ಬಳ್ಳಾರಿ ಸೆ 30.”ಶ್ರೀ ವೀರಶೈವ ವಿದ್ಯಾವರ್ಧಕ ಸಂಘ”ದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪೌರತ್ವ ಶಿಬಿರವನ್ನು ಚಳ್ಳಗುರ್ಕಿಯಲ್ಲಿ ಆಯೋಜಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ ರವರು ಪೌರರ ಗುಣ ಹಾಗೂ ಕರ್ತವ್ಯಗಳನ್ನು ವಿವರಿಸಿದರು. ನಾಗರಿಕರ ಜವಾಬ್ದಾರಿ ಸರಕಾರಕ್ಕಿರುವಷ್ಟೇ ಇದೆ ಎಂದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆದೇಶದಂತೆ ಪ್ರತಿ ಶುಕ್ರವಾರ ಖಾದಿ ಸಮವಸ್ತ್ರ ಧರಿಸುವಿಕೆ ಗೆ ಚಾಲನೆ ನೀಡಲಾಯಿತು. ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಸರ್ವ ಪ್ರಶಿಕ್ಷಣಾರ್ಥಿಗಳು ಖಾದಿ ಸಮವಸ್ತ್ರ ಧರಿಸುವುದು ಕಂಡುಬAದಿತು.ಶಿಬಿರದ ನಿರ್ದೇಶಕರಾದ ಡಾಕ್ಟರ್ ಸತೀಶ್ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಬಿರದ ಸಂಯೋಜಕರಾದ ಡಾಕ್ಟರ್ ಚನ್ನವೀರ ಸ್ವಾಮಿ ಅಊಒ ಅವರು ಪ್ರಮಾಣವಚನ ಬೋಧಿಸಿದರು. 

ಡಾಕ್ಟರ್ ಸುರೇಶ್ ಬಾಬು ಸರ್ವರನ್ನು ಸ್ವಾಗತಿಸಿದರು, ಕುಮಾರಿ ಅಶ್ವಿನಿ ಪ್ರಾರ್ಥಿಸಿದರು, ವಿದ್ಯಾರ್ಥಿ ವೀರೇಂದ್ರಕುಮಾರ್.ಒ ವಂದನಾರ್ಪಣೆ ಸಲ್ಲಿಸಿದರು, ಶ್ರೀಮತಿ ಸುಶೀಲ ಶಿರೂರು ಹಾಗೂ ಡಾಕ್ಟರ್ ಜಗದೀಶ್ ಬಸಾಪುರ ಅವರು ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸರ್ವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *