ರೋಟರಿ ಕ್ಲಬ್ ಮತ್ತು ಇನ್ನರ್‌ವ್ಹೀಲ್ ಕ್ಲಬರ್ ಸಂಯುಕ್ತಾಶ್ರಯದಲ್ಲಿ ಶಿಕ್ಷಕರಿಗೆ ಸನ್ಮಾನ, ಹೊಲಿಗೆ ಯಂತ್ರದ ಉಚಿತ ತರಬೇತಿ

ಬಳ್ಳಾರಿ, ಸೆ.30: ರೋಟರಿ ಕ್ಲಬ್ ಮತ್ತು ಇನ್ನರ್‌ವ್ಹೀಲ್ ಕ್ಲಬರ್ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರದ ಉಚಿತ ತರಬೇತಿಯನ್ನು ಬಳ್ಳಾರಿಯ ರೋಟರಿ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಬಿ.ಆರ್.ಎಲ್.ಶೀನ, ರೋಟರಿ ಕ್ಲಬ್‌ನ ಅಧ್ಯಕ್ಷ ಕೆ.ಎಂ.ಶಿವಕುಮಾರ್, ಕಾರ್ಯದರ್ಶಿ ವಿ.ಚಂದ್ರಶೇಖರ್, ಸದಸ್ಯರಾದ ರವೀಂದ್ರನಾಥ್, ನಾಮಾ ಸತ್ಯನಾರಾಯಣ, ವಿನೋದ್ ಜೈನ್, ಇನ್ನರ್ ವ್ಹೀಲ್‌ನ ಅಧ್ಯಕ್ಷರಾದ ಶ್ರೀಮತಿ ರೂಪ, ಕಾರ್ಯದರ್ಶಿ ಸಿಂಧು, ಸದಸ್ಯರಾದ ಗೀತಾನಾಯ್ಡು, ಅನಿತಾ ಜೈನ್, ದಿವ್ಯ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಡಾ. ಎಸ್.ವೈ.ತಿಮ್ಮಾರೆಡ್ಡಿ, ಡಾ. ಬಿ. ಗೋವಿಂದರಾಜ್, ಕೆ.ಕಮಲನಾಭ, ಎಂ.ಎನ್.ಶ್ರೀಮತಿ, ಬಿ.ರಘು, ಎಂ.ಎನ್.ಶಿವಣ್ಣನವರ್ ಇವರುಗಳನ್ನು ಸನ್ಮಾನಿಸಲಾಯಿತು. ನಂತರ ಆಯ್ಕೆ ಮಾಡಿದ ಮಹಿಳಾ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರದ ತರಬೇತಿಯನ್ನು ನಡೆಸಲಾಯಿತು.

Leave a Reply

Your email address will not be published. Required fields are marked *