ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2020-21 ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ (B.A./B.Com/B.Lib.I.Sc./M.A./M.Com/M.Sc./M.BA/ M.Lib.I.Sc./B.Ed) ಮತ್ತು 2019-20 ನೇ ಸಾಲಿನ ದ್ವಿತೀಯ ವರ್ಷದ ಸ್ನಾತಕ (B.A./B.Com) ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದ ತರಗತಿಗಳನ್ನು ಆನ್‍ಲೈನ್ ಮುಖಾಂತರ ಅಕ್ಟೋಬರ್ 8 ರಿಂದ ನಡೆಸಲಾಗುತ್ತಿದೆ.
ಕೌಶಲ್ಯಾಭಿವೃದ್ಧಿ ತರಬೇತಿಯ ಪಠ್ಯವಿಷಯ, ವೇಳಾಪಟ್ಟಿ ಮತ್ತು ತರಗತಿಗಳ ಆನ್‍ಲೈನ್ ವೆಬ್‍ಲಿಂಕ್ ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ E-Digital ಪ್ರಮಾಣಪತ್ರವನ್ನು ನೀಡಲಾಗುವುದು. ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜನಾಧಿಕಾರಿ ಲೋಕೇಶ.ಜಿ.ಎಸ್. ಮೊ.ಸಂ. 9611434810 ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.