ಪರಿಷತ್ತಿನ ಕೆಲವು ಪುಸ್ತಕಗಳ ಉಚಿತ ವಿಲೇವಾರಿಗೆ ತೀರ್ಮಾನ.

ಕನ್ನಡ ಸಾಹಿತ್ಯ ಪರಿಷತ್ತಿನ ದಾಸ್ತಾನಿನಲ್ಲಿ ಹಲವು ಪುಸ್ತಕಗಳು ಇದ್ದು, ಅವುಗಳಲ್ಲಿ ಕೆಲವು ಪುಸ್ತಕಗಳನ್ನು ಉಚಿತವಾಗಿ ವಿಲೇವಾರಿ ಮಾಡಲು ಇಂದು (08-10-2021) ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಪುಸ್ತಕಗಳನ್ನು ಎಲ್ಲಾ ಹಂತದ ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು  ಗ್ರಂಥಾಲಯಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕನ್ನಡ ಸಂಘಟನೆಗಳು ಪಡೆಯಬಹುದು.

ವಿಲೇವಾರಿಗೆ ಲಭ್ಯವಿರುವ ಪುಸ್ತಕದ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್ ತಿತಿತಿ.ಞಚಿsಚಿಠಿಚಿ.iಟಿ ನಲ್ಲಿ ಪ್ರಕಟಿಸಲಾಗಿದೆ. 

ಆಸಕ್ತರು ತಮಗೆ ಬೇಕಾದ ಪುಸ್ತಕಗಳ ಪಟ್ಟಿಯನ್ನು ನಮ್ಮ  e-mಚಿiಟ : ಞಚಿಟಿಟಿಚಿಜಚಿಠಿಚಿಡಿishಚಿಣಣu@gmಚಿiಟ.ಛಿom ಗೆ ತಮ್ಮ ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಕಳುಹಿಸಲು ಕೋರಲಾಗಿದೆ. ನೀವು ಆಯ್ಕೆ ಮಾಡಿದ ಪುಸ್ತಕಗಳನ್ನು ನಿಮ್ಮ ಖರ್ಚಿನಲ್ಲಿಯೇ ತೆಗೆದುಕೊಂಡು ಹೋಗಬೇಕು. 

ತಜ್ಞರ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎಸ್. ರಂಗಪ್ಪ ಅವರು, ಹಿರಿಯ ಸಾಹಿತಿಗಳಾದ 

ಡಾ. ದೊಡ್ಡರಂಗೇಗೌಡ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷಾಧಿಕಾರಿ ಶ್ರೀ ಚನ್ನಕೇಶವ ಹಾಗೂ ಪರಿಷತ್ತಿನ ಗೌರವ ಸಲಹೆಗಾರರಾದ ಡಾ. ಪದ್ಮರಾಜ ದಂಡಾವತಿ ಅವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *