ನವರಾತ್ರಿ ಸಂಗೀತೋತ್ಸವ: ಮನಸೆಳೆದ ಗಾಯನ

ದಾಸವಾಣಿ ಫೇಸ್ಬುಕ್ ಸಮೂಹವು ದಸರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ನವರಾತ್ರಿ ಸಂಗೀತೋತ್ಸವದ ಲೈವ್ ಕಾರ್ಯಕ್ರಮದಲ್ಲಿ ಸಂಗೀತ ಪ್ರಿಯರ ಮನ ಗೆದ್ದಿದ್ದಾರೆ.

 ಅಕ್ಟೋಬರ್ 11ರಂದು ಕು|| ಅಭಿಜ್ಞಾ ಪಿ. ಕಶ್ಯಪ್ ಅವರು ತಮ್ಮ ಗಾಯನವನ್ನು “ಶರಣು ಸಿದ್ಧಿ ವಿನಾಯಕ” ಎಂಬ ಗಣೇಶನ ಕೃತಿಯೊಂದಿಗೆ ಆರಂಭಿಸಿ, “ದೇವಿ ಶಾರದೆ”, “ಭಜರೇ ಹನುಮಂತಂ”, “ಕ್ಷೀರಾಬ್ಧಿ ಕನ್ನಿಕೆ”, “ಬಂದೇವಯ್ಯ ಗೋವಿಂದ ಶೆಟ್ಟಿ”, “ಕೃಷ್ಣಾ ಕೃಷ್ಣಾ ಕೃಷ್ಣಾ ಎಂದು ಮೂರು ಬಾರಿ ನೆನೆಯಿರೋ”, “ಅಂಗಳದೊಳು ರಾಮನಾಡಿದ”, “ಯಾರೇ ರಂಗನ ಯಾರೇ ಕೃಷ್ಣನ” ಇನ್ನೂ ಕೆಲವಾರು ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದ್ದು, ಕೇಳುಗರ ಮನಸೆಳೆದಿತ್ತು.

Leave a Reply

Your email address will not be published. Required fields are marked *