119 ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ- ಕೆ.ವೆಂಕಟೇಶುಲು ಶೆಟ್ಟಿ

ಬಳ್ಳಾರಿ, ಅ.23: ಶ್ರೀ ವೆಂಕಟ ವರದಾಚಾರ್ಯ ಸೇವಾ ಸಮಿತಿ ಟ್ರಸ್ಟ್ ಬಳ್ಳಾರಿ ಇವರ ವತಿಯಿಂದ ಬಳ್ಳಾರಿ ಮತ್ತು ತಾಲ್ಲೂಕಿನ 90ಗ್ರಾಮಗಳ 119 ಕನ್ನಡ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಮಕ್ಕಳಿಗೆ ಇದೇ ದಿನಾಂಕ 25.10.2021 ರಿಂದ ಉಚಿತವಾಗಿ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ಪೂರ್ವ ವಲಯ ಮತ್ತು ಪಶ್ಚಿಯ ವಲಯಗಳ ವಿಭಾಗದ ಸುಮಾರು 119 ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಮಕ್ಕಳಿಗೆ ಅನುಕೂಲವಾಗಲಿದೆ. 

ಈ ಕಾರ್ಯಕ್ರಮದಲ್ಲಿ ಆಯಾ ಶಾಲಾ ಮುಖ್ಯ ಗುರುಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :ಕೆ.ವೆಂಕಟೇಶುಲು ಶೆಟ್ಟಿ ಅಧ್ಯಕ್ಷರು – 8277249823,ಪೋಲಾ ಬಸವರಾಜಕಾರ್ಯದರ್ಶಿ 9620189093,ತಲ್ಲಂ ರಮೇಶ್ ಖಜಾಂಚಿ – 9845876335.

VARTHAJALA, BELLARY

Leave a Reply

Your email address will not be published. Required fields are marked *