ಫಾರೆಸ್ಟ್ರಿ ಮತ್ತು ನಾನ್ ಫಾರೆಸ್ಟ್ರಿ ಹುದ್ದೆಗಳಿಗೆ ದೈಹಿಕ ಸಹಿಷ್ಣುತೆ ಮತ್ತು ಶಾರೀರಿಕ ಪರೀಕ್ಷೆ

ಬೆಂಗಳೂರು, ನವೆಂಬರ್ 06, (ಕರ್ನಾಟಕ ವಾರ್ತೆ) :  ಕರ್ನಾಟಕ ಲೋಕ ಸೇವಾ ಆಯೋಗವು ಕರ್ನಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ “ಎ” ಉಳಿಕೆ ಮೂಲ ವೃಂದದ 24 (ಫಾರೆಸ್ಟ್ರಿ 11 + 02 ಬ್ಯಾಕ್‍ಲಾಗ್ ಮತ್ತು ನಾನ್ ಫಾರೆಸ್ಟ್ರಿ 11 ) ಹುದ್ದೆಗಳಿಗೆ 1:5 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತೆ ಪರೀಕ್ಷೆಯನ್ನು ದಿನಾಂಕ: 13-12-2021 ರಂದು ಮತ್ತು ಶಾರೀರಿಕ ದಾಢ್ರ್ಯತೆ ಪರೀಕ್ಷೆಯನ್ನು ದಿನಾಂಕ: 15-12-2021 ಮತ್ತು 16-12-2021ರಂದು ನಡೆಸಲು ಇಲಾಖೆಯವರು ದಿನಾಂಕವನ್ನು ನಿಗದಿಪಡಿಸಿದ್ದು, ಈ ಸಂಬಂಧ, ಸಂಬಂಧಿತ ಇಲಾಖೆಯಿಂದ ಅಭ್ಯರ್ಥಿಗಳಿಗೆ ಸೂಚನೆಯನ್ನು ನೀಡಲಾಗುವುದು. ಮಾಹಿತಿಗಾಗಿ ಸಂಬಂಧಿತ  ಇಲಾಖೆಯವರನ್ನು ಸಂಪರ್ಕಿಸಬಹುದೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Leave a Reply

Your email address will not be published. Required fields are marked *