ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡಲು ತೀರ್ಮಾನ ಮಾಡಿರುವ ಬಗ್ಗೆ

 ದಿನಾಂಕ:8-11-2021ರAದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಮುಂಬಡ್ತಿಯನ್ನು ಪ್ರಸ್ತುತ ರಿಕ್ತ ಸ್ಥಾನ ಆಧಾರಿತ ಹುದ್ದೆಗಳ ಆಧಾರದ ಮೇರೆಗೆ ನೀಡುತ್ತಿದ್ದು, ಇನ್ನು ಮುಂದೆ ಹುದ್ದೆ ಆಧಾರಿತ (Post Based) ಹುದ್ದೆಗಳನ್ನಾಗಿ ವರ್ಗೀಕರಿಸಿ ಮುಂಬಡ್ತಿ ನೀಡಲು ತೀರ್ಮಾನ ಮಾಡಿರುವ ಬಗ್ಗೆ


ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಲಭ್ಯವಾಗುವ ಹುದ್ದೆಗಳನ್ನು ರಿಕ್ತಸ್ಥಾನ ಆಧಾರಿತ ಹುದ್ದೆಗಳೆಂದು ಪರಿಗಣಿಸಿ ಪದೋನ್ನತಿ ನೀಡಲಾಗುತ್ತಿತ್ತು.

 ಇದರಿಂದಾಗಿ ರಾಜ್ಯ ಸರ್ಕಾರ ನೌಕರರಿಗೆ ಮುಂಬಡ್ತಿ ಅವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿರಲಿಲ್ಲ. ಈ ಸಂಬAಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಮನವಿ ಸಲ್ಲಿಸಿ ರಾಜ್ಯದ ಸರ್ಕಾರಿ ನೌಕರರಿಗೆ ಮುಂಬಡ್ತಿಗಳನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿ ಹಾಗೂ ರಾಜ್ಯದ ಕೆ.ಎ.ಎಸ್. ಅಧಿಕಾರಿಗಳಿಗೆ ನೀಡುತ್ತಿರುವ ಹುದ್ದೆ ಆಧಾರಿತ (Post Based) ಮಾದರಿಯಲ್ಲಿ ಪದೋನ್ನತಿ ಅವಕಾಶ ಕಲ್ಪಿಸಿಸುವಂತೆ ಸರ್ಕಾರಕ್ಕೆ ವಿನಂತಿಸಲಾಗಿತ್ತು.

ಆದರAತೆ ಸರ್ಕಾರವು ದಿ:08-11-2021 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆ.ಎ.ಎಸ್. ಅಧಿಕಾರಿಗಳಿಗೆ ನೀಡುವ ಮುಂಬಡ್ತಿಯ ಮಾದರಿಯಲ್ಲಿ ರಿಕ್ತ ಸ್ಥಾನ ಹುದ್ದೆಗಳಿಗೆ ಬದಲಾಗಿ ಹುದ್ದೆ ಆಧಾರಿತ (Posಣ bಚಿseಜ) ಹುದ್ದೆಗಳನ್ನಾಗಿ ವರ್ಗೀಕರಿಸಿ ಎಲ್ಲಾ ಇಲಾಖೆಯ ನೌಕರರಿಗೆ ಮುಂಬಡ್ತಿಗಳನ್ನು ನೀಡಲು ನಿರ್ಣಯ ಕೈಗೊಳ್ಳಲಾಗಿರುತ್ತದೆ.

    ರಿಕ್ತ ಸ್ಥಾನದ ಹುದ್ದೆಗಳನ್ನು ಪೋಸ್ಟ್ ಬೇಸ್ಡ್ ಹುದ್ದೆಗಳನ್ನಾಗಿ ವರ್ಗೀಕರಿಸಿ ಮುಂಬಡ್ತಿಗೆ ಪರಿಗಣಿಸುವುದರಿಂದ ಎಲ್ಲಾ ಇಲಾಖೆಗಳಲ್ಲಿನ ರಾಜ್ಯ ಸರ್ಕಾರಿ ನೌಕರರಿಗೆ ಶೇ.25-30 ರಷ್ಟು ಮುಂಬಡ್ತಿ ಅವಕಾಶಗಳು ಹೆಚ್ಚಳವಾಗಲಿದೆ ಹಾಗೂ ನೇರ ನೇಮಕಾತಿ-ಮುಂಬಡ್ತಿ ಹುದ್ದೆಗಳ ವರ್ಗಿಕರಣದಲ್ಲಿದ್ದ ಅಸಮತೋಲನ ಸರಿಯಾಗಲಿದೆ.

ಸಂಘದ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಎಲ್ಲಾ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಸಂಘವು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತದೆ.

Leave a Reply

Your email address will not be published. Required fields are marked *