ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ, ನೋಟ್ ಪುಸ್ತಕಗಳ ವಿತರಣೆ

ಬಳ್ಳಾರಿ ನ 18. ಬಳ್ಳಾರಿ ನಗರದ 22ನೇ ವಾರ್ಡಿನ ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರಾದ ಹನುಮಂತಪ್ಪ.ಕೆ ರವರ ಜನ್ಮದಿನದ ಪ್ರಯುಕ್ತ ಕಪ್ಪಗಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ನಲ್ಲಿ ರಕ್ತಧಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

 ಈ ಸಂದರ್ಭದಲ್ಲಿ ಸುಮಾರು 101 ಜನ ರಕ್ತಧಾನ ಮಾಡಿದರು. ಬಳ್ಳಾರಿ ನಗರ ಶಾಸಕರಾದ ಜಿ.ಸೋಮ ಶೇಖರ ರೆಡ್ಡಿ ಭಾಗವಹಿಸಿ ಶುಭಾಶಯಗಳನ್ನು ತಿಳಿಸಿದರು.ನಂತರ ಕೆ.ಹೆಚ್.ಬಿ ಕಾಲೋನಿಯ ಸರಕಾರಿ ಶಾಲೆಯಲ್ಲಿ ಹಾಗೂ ಕಸ್ತೂರಿ ಬಾಯಿ ಸರಕಾರಿ ಪ್ರೌಡ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಸುಮಾರು 2000 ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

 ಈ ಕಾರ್ಯಕ್ರಮಕ್ಕೆ ನಗರ ಅಧ್ಯಕ್ಷರಾದ ಕೆ.ಬಿ ವೆಂಕಟೇಶ್, ವೀರಶೇಖರ ರೆಡ್ಡಿ,ಶ್ರೀನಿವಾಸ್ ಮೋತ್ಕರ್,ಮಹಾನಗರ ಪಾಲಿಕೆಯ ಸದಸ್ಯರುಗಳಾದ ಸಿ.ಎಮ್.ಇಬ್ರಾಹಿಮ್ ಬಾಬು,ಕೆ.ಎಸ್.ಅಶೋಕ್, ಕೋನಂಕಿ ತಿಲಕ್, ಸುರೇಂದ್ರ,ಮಲ್ಲನ ಗೌಡ,ವೆಂಕಟ ರಮಣ,ಪ್ರಧಾನ ಕಾರ್ಯದರ್ಶಿ ಕೆ.ರಾಮಾಂಜಿನಿ ಮುಖಂಡರುಗಳಾದ ಎರ್ರಿಸ್ವಾಮಿ,ರಾಮಾಂಜಿನಿದುರ್ಗೆಶ್,ಷಣ್ಮುಖ,ಮಣಿ ದೇವರಾಜ್ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *