ಕರ್ನಾಟಕ ಮುಕ್ತ ಶಾಲೆ- ಕೆ.ಓ.ಎಸ್ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಅಕ್ಟೋಬರ್ -2021ರ ಮಾಹೆಯಲ್ಲಿ ನಡೆಸಿದ ಕರ್ನಾಟಕ ಮುಕ್ತ ಶಾಲೆ- ಕೆ.ಓ.ಎಸ್ ಪೂರಕ ಪರೀಕ್ಷೆಯ ಫಲಿತಾಂಶವನ್ನು ನವೆಂಬರ್ 26 ರಂದು ಅಪರಾಹ್ನ 3 ಗಂಟೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‍ಸೈಟ್ https://sslc.karnataka.gov.in  ನಲ್ಲಿ ಪ್ರಕಟಿಸಲಾಗಿದೆ.

ಫಲಿತಾಂಶ ಪಟ್ಟಿಯನ್ನು ಸಂಬಂಧಿಸಿದ ಕಲಿಕಾ ಕೇಂದ್ರಗಳ ಲಾಗಿನ್‍ನಲ್ಲಿ ಲಭ್ಯ ಮಾಡಲಾಗುವುದು. ಕರ್ನಾಟಕ ಮುಕ್ತ ಶಾಲೆ – ಕೆ.ಓ.ಎಸ್ ಕಲಿಕಾ ಕೇಂದ್ರಗಳ ಸಮನ್ವಯಾಧಿಕಾರಿಗಳು ನವೆಂಬರ್ 27 ರಂದು ಫಲಿತಾಂಶವನ್ನು ಆಯಾ ಕಲಿಕಾ ಕೇಂದ್ರಗಳಲ್ಲಿ ಪ್ರಕಟಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು    (ಇತರೆ ಪರೀಕ್ಷೆಗಳು) ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *