ಗಾಂಧೀ ಲೇಖನ ಸ್ಪರ್ಧೆ

ಗಾಂಧಿ ಶಾಂತಿ ಪ್ರತಿಷ್ಠಾನವು  ಮುಂಬರುವ 2022 ಜನವರಿ 30 ಸರ್ವೋದಯ ದಿನದ ಸಂದರ್ಭದಲ್ಲಿ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.

ಅಂದಿಗೂ ಇಂದಿಗೂ ಪ್ರಸ್ತುತ ಗಾಂಧಿ ವಿಚಾರಧಾರೆ ಲೇಖನದ ವಸ್ತುವಾಗಿದ್ದು, ಗಾಂಧಿ ಚಿಂತನೆ ಹಾಗೂ ಇಂದಿನ ಪರಿಸ್ಥಿತಿ ಮತ್ತು ಸವಾಲುಗಳನ್ನು ಕುರಿತು ‘ಗಾಂಧಿಗೆ ಒಂದು ಪತ್ರ’ ಈ ಎರಡು ಕನ್ನಡ ಲೇಖನ ಸ್ಪರ್ಧೆಗಳಲ್ಲಿ 15-30 ವಯೋಮಿತಿಯ ಯುವಜನರು ಮಾತ್ರ ಭಾಗವಹಿಸಬಹುದು.

ಪತ್ರ ಲೇಖನದಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಡ್ಡಾಯವಾಗಿ ಅಂಚೆ ಕಚೇರಿಯಲ್ಲಿ ದೊರಕುವ ಅಂತರ್ದೇಶೀಯ ಪತ್ರ    (ಇನ್‌ಲ್ಯಾಂಡ್ ಲೆಟರ್) ದಲ್ಲಿ ತಮ್ಮ ಸ್ವಂತ ಕೈ ಬರಹದಲ್ಲಿ ಬರೆಯಬೇಕು. ಉಳಿದಂತೆ ಲೇಖನ ಸ್ಪರ್ಧಿಗಳು ಎ4 ಅಳತೆಯ ಮೂರು ಪುಟಗಳಿಗೆ ಮೀರದಂತೆ ತಮ್ಮ ಬರಹಗಳನ್ನು ಸೀಮಿತಗೊಳಿಸಬೇಕು.  ದಶಮಾನೋತ್ಸವ ಆಚರಿಸುತ್ತಿರುವ ಗಾಂಧಿ ವಿಚಾರಕ್ಕೆ ಮೀಸಲಾದ ಕನ್ನಡ-ಇಂಗ್ಲಿಷ್ ದ್ವೆöÊಮಾಸಿಕ ‘ಅಮರ ಬಾಪು ಚಿಂತನ’ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯಲಿದ್ದು ಭಾಗವಹಿಸಿದ ಎಲ್ಲರಿಗ ಇ-ಪ್ರಮಾಣ ಪತ್ರ ನೀಡಲಾಗುವುದು ಮತ್ತು ತೀರ್ಪುಗಾರರು ಆಯ್ಕೆ ಮಾಡಿದ ಲೇಖನಗಳನ್ನು ಅಮರ ಬಾಪು ಚಿಂತನ ಪತ್ರಿಕೆಯಲ್ಲಿ  ಪ್ರಕಟಿಸಲಾಗುವುದು.

ಸ್ಪರ್ಧಿಗಳು ತಮ್ಮ ಲೇಖನ/ಪತ್ರಗಳನ್ನು ಅಧ್ಯಕ್ಷರು , ಗಾಂಧಿ  ಶಾಂತಿ ಪ್ರತಿಷ್ಠಾನ , ಗಾಂಧೀಭವನ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001 ಈ ವಿಳಾಸಕ್ಕೆ ಡಿಸೆಂಬರ್ 31 2021 ರೊಳಗೆ ತಲುಪುವಂತೆ ಕಳುಹಿಸಬೇಕು. ಸ್ಪರ್ಧಿಗಳು ತಮ್ಮ ಜನ್ಮ ದಿನಾಂಕ – ವರ್ಷ ಮತ್ತು ದೂರವಾಣಿ ಸಂಖ್ಯೆ ನಮೂದಿಸುವುದು ಕಡ್ಡಾಯ. 

ಇ-ಮೇಲ್ : editor.abc2020@gmail.com    ವಿವರಗಳಿಗೆ : 90356 18076 / 80880 13083

Leave a Reply

Your email address will not be published. Required fields are marked *