ಧರ್ಮಾವರಂ ರಾಮಕೃಷ್ಣಮಾಚಾರ್ಯರ ಪುಣ್ಯ ಸ್ಮರಣೆ ಕಾರ್ಯಕ್ರಮ

ಬಳ್ಳಾರಿ ಡಿ 02.:  ಕನ್ನಡ ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಬಳ್ಳಾರಿಜಿಲ್ಲೆಯ ರಂಗಪರAಪರೆಯನ್ನು ನೋಡುವುದಾದರೆ ಕನ್ನಡ ಮತ್ತು ತೆಲುಗು ರಂಗಭೂಮಿಯಲ್ಲಿ ಪ್ರಪ್ರಥಮವಾಗಿ ರ‍್ಮಾವರಂ ರಾಮ ಕೃಷ್ಣಮಾಚಾರ್ಯರು ಮೊದಲಿಗರಾಗುತ್ತಾರೆ. ಎಂದು ಪ್ರೊ ಎನ್ ಶಾಂತನಾಯ್ಕ ಮುಖ್ಯಸ್ಥರು ನಾಟಕ ವಿಭಾಗದಲ್ಲಿ ಉಪನ್ಯಾಸದಲ್ಲಿ ಮುಖ್ಯತಿಥಿಗಳಾಗಿ ಮಾತನಾಡಿದರು.

 ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದಿಂದ ದಿನಾಂಕ 02-12-2021 ಬೆಳಿಗ್ಗೆ 11-00 ಗಂಟೆಗೆ ಶ್ರೀ ಧರ್ಮಾವರಂ ರಾಮಕೃಷ್ಣಮಾಚಾರ್ಯರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿತ್ತು.

ವಿಶೇಷ ಉಪನ್ಯಾಸ ಶ್ರೀ ಧರ್ಮಾವರಂ ರಾಮಕೃಷ್ಣಮಾಚಾರ್ಯರ ಜೀವನ ಹಾಗೂ ರಂಗಭೂಮಿ ಕುರಿತು ಕಾರ್ಯಕ್ರಮದಲ್ಲಿ  ವಿಶೇಷ ಉಪನ್ಯಾಸ ನೀಡಿದ  ಕೆ ಬಿ ಸಿದ್ದಲಿಂಗಪ್ಪ ಗಣ್ಯರು ಕಾರ್ಯಕ್ರಮಕ್ಕೆ ಡೋಲಕ್ ಬಾರಿಸುವುದರ ಮೂಲಕ ಚಾಲನೆ ನೀಡಿ ನಂತರ ಶ್ರೀ ಧರ್ಮಾವರಂ ರಾಮಕೃಷ್ಣಮಾಚಾರ್ಯರ ಭಾವಚಿತ್ರಕ್ಕೆ ಗಣ್ಯರು ಪುಷ್ಪವನ್ನು ಅರ್ಪಿಸಿದರು.

. ನಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ನಮ್ಮ ಸಾಹಿತ್ಯ ಮತ್ತು ಕಲಾಸಕ್ತಿ ಮೂಲೆ ಗುಂಪಾಗಿ ಹೋಗುತ್ತಿದೆ .ಇದಕ್ಕೆ ಕಾರಣವಾಗಿರುವಂತಹ ದಿನನಿತ್ಯ ಮೊಬೈಲ್ ಫೋನ್ ಗೆ ಜೋತು ಬಿದ್ದಿರುವುದು ಮತ್ತು ಗುರು ಹಿರಿಯರ ಬಗ್ಗೆ ಗೌರವ ಗುಣಗಳನ್ನು ಕಳೆದುಕೊಂಡಿರುವುದು.  ಅದಕ್ಕಾಗಿ ವಿದ್ಯಾರ್ಥಿಗಳು ಮತ್ತು ಇಂದಿನ ಮಕ್ಕಳು ನಾಟಕ ರಚನೆ ಸಾಹಿತ್ಯದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಧರ್ಮಾವರಂ ರಾಮಕೃಷ್ಣಮಾಚಾರ್ಯರ ಮೂವತ್ತು ನಾಟಕಗಳನ್ನು ರಚಿಸಿ ಅಭಿನಯಿಸಿದ್ದಾರೆ ಇವರ ತೆಲುಗು ನಾಟಕಗಳನ್ನು ಕನ್ನಡ ಭಾಷೆಗೆ ಅನುವಾದಿಸಲು ಮುಂದಾಗಬೇಕು ಎಂದು ಪ್ರೊ.ಎನ್ ಶಾಂತನಾಯ್ಕ ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥರು ಹೇಳಿದರು. 

ನಂತರ ವಿಶೇಷ ಉಪನ್ಯಾಸ ವನ್ನು ಕೆ.ಬಿ ಸಿದ್ದಲಿಂಗಪ್ಪ ಅವರು ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಬಳ್ಳಾರಿ ಇವರು ಉಪನ್ಯಾಸದಲ್ಲಿ  ಶ್ರೀ ಧರ್ಮಾವರಂ ರಾಮಕೃಷ್ಣಮಾಚಾರ್ಯರ ಜೀವನ ಮತ್ತು ಅವರು ನಡೆದು ಬಂದ ರಂಗಭೂಮಿ, ವೃತ್ತಿ ಜೀವನದ ಬಗ್ಗೆ  ತಿಳಿಸಿದರು ನಂತರ ಶ್ರೀ ಧರ್ಮಾವರಂ ರಾಮಕೃಷ್ಣಮಾಚಾರ್ಯರ ಮನೋಭಿಲಾಷಿಯಂತೆ ಅವರು ಕೊನೆಯ ನುಡಿ ನನ್ನ ಜೀವನ ರಂಗವೇದಿಕೆ ಮತ್ತು ನನ್ನ ವೃತ್ತಿ ವಕೀಲದಲ್ಲಿ ಕೊನೆಯ ಉಸಿರು ಹೋಗುವವರೆಗೂ ನಾನು ರಂಗಭೂಮಿಯಲ್ಲೇ  ಎಂದು ಅವರ ವiತಿನಂತೆ  ಧರ್ಮಾವರಂ ರಾಮಕೃಷ್ಣಮಾಚಾರ್ಯರ ಇವರು ಕೊನೆಯ ದಿನ ಕೋರ್ಟನಲ್ಲಿ  ವಾದ ಮಾಡುತ್ತಾ ಹಠತ್ತಾಗಿ ತಮ್ಮ ಜೀವನ ಕೊನೆಯ ಉಸಿರು ಎಳೆದರು. ಎಂದು ವಿಶೇಷ ಉಪನ್ಯಾಸ ದಲ್ಲಿ ಕೆ ಬಿ ಸಿದ್ದಲಿಂಗಪ್ಪನವರು ಮಾತನಾಡಿದರು.

ಕನ್ನಡ ವಿಭಾಗದ ಉಪನ್ಯಾಸಕರಾದ ಶಿವಪ್ರಕಾಶ್ ನಾಟಕ ಮತ್ತು ಸಾಹಿತ್ಯ ಒಂದೇ ನಾಣ್ಯದ ಮುಖಗಳು ಇಂದಿನ ವಿದ್ಯಾರ್ಥಿಗಳು ಹಲವಾರು ನಾಟಕರಾರ ಬಗ್ಗೆ ಮತ್ತು ನಾಟಕ ಮಾಡುವ ಮತ್ತು ನೋಡುವ ಹವ್ಯಾಸ ಬೆಳಿಸಿಕೊಳ್ಳಬೇಕು. ಸಿನಿಮಾ ಮತ್ತು ಧಾರಾವಾಹಿಯಿಂದ ಈಗಿನ ಕಲೆ ಮತ್ತು ಸಾಹಿತ್ಯ ಮೂಲೆ ಗುಂಪಾಗುತ್ತದೆ ಇದನ್ನು ಉಳಿಸಿ ಬೆಳೆಸುವ ಕೆಲಸ ವಿದ್ಯಾರ್ಥಿಗಳು ಎಲ್ಲರೂ ಮಾಡಬೇಕು.ನಾಟಕ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ರಂಗಗೀತೆ ಯನ್ನು  ಎಸ್.ಎಂ ಹುಲುಗಪ್ಪ ವೀರೇಶ ದಳವಾಯಿ ಹಾಗೂ ಉಷಾ ಪ್ರಸ್ತುತ ಪಡಿಸಿದರು.ನಂತರ ನಾಟಕ ಉಪನ್ಯಾಸಕರಾದ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಮತ್ತು ಡಾ.ಸಹನಾ ಪಿಂಜಾರ್ ಕನ್ನಡ ವಿಭಾಗದಿಂದ ಡಾ. ಕೆ ಶಕೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕನ್ನಡ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ನಾಟಕ ವಿಭಾಗದ ವಿದ್ಯಾರ್ಥಿಗಳಾದ ಮೀರಾಬಾಯಿ ನಿರೂಪಣೆ ಮಾಡಿದರು, ಅನಿತಾ ಸ್ವಾಗತಿಸಿದರು, ನೇತಿರಘುರಾಮ ವಂದಿಸಿದರು 

Leave a Reply

Your email address will not be published. Required fields are marked *