ವಾಣಿಜ್ಯ ಪರೀಕ್ಷೆಗೆ ಅರ್ಜಿ ಆಹ್ವಾನ

ಕನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಇತರೆ ಪರೀಕ್ಷೆಗಳು) ಮಲ್ಲೇಶ್ವರಂ, ಬೆಂಗಳೂರು ವತಿಯಿಂದ 2022ರ ಜನವರಿ ಮಾಹೆಯಲ್ಲಿ ನಡೆಯುವ ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗೂ ಮುದ್ರಣ ವಿಷಯಗಳಿಗೆ ಮಾನ್ಯತೆ ಪಡೆದ ವಾಣಿಜ್ಯ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಅರ್ಹ  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

 ದಿನಾಂಕ: 03/12/2021 ರಿಂದ 17/12/2021ರವರೆಗೆ ದಂಡರಹಿತವಾಗಿ ಹಾಗೂ ದಂಡಸಹಿತವಾಗಿ 18/12/2021ರಿಂದ 20/12/2021ರವರೆಗೆ ಅರ್ಜಿಗಳನ್ನು  ಸಲ್ಲಿಸಬಹುದಾಗಿದೆ.
ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಮಂಡಳಿಯ ಜಾಲತಾಣ https://sslc.karnataka.gov.in     ದಲ್ಲಿ ತಮ್ಮ ಸಂಸ್ಥೆಯ ಲಾಗಿನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಇತರೆ ಪರಿಕ್ಷೆಯ ನಿರ್ದೇಶಕರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *