ಸಕಾಲ ಮಿಷನ್‍ನ ನಿರ್ವಹಣಾ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಸಕಾಲ ಮಿಷನ್ ಮತ್ತು ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಇ-ಆಡಳಿತ ಉಪಕ್ರಮಗಳನ್ನು ನಿರ್ವಹಿಸಲು ಹೊರಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ (ವಿಸ್ತರಿಸಬಹುದಾದ) ಅವಧಿಯವರೆಗೆ ನಿರ್ವಹಣಾ ಸಮಾಲೋಚಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 10, 2021 ಕೊನೆಯ ದಿನಾಂಕವಾಗಿದೆ. ಸಂದರ್ಶನವನ್ನು ಡಿಸೆಂಬರ್ 14, 2021 ರಂದು ನಿಗಧಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಎಂ.ಬಿ.ಎ ವಿದ್ಯಾರ್ಹತೆಯನ್ನು ಹೊಂದಿದ್ದು, 5 ವರ್ಷಗಳ ಸೇವಾನುಭವವನ್ನು ಹೊಂದಿರಬೇಕು. ಗುತ್ತಿಗೆ ಅವಧಿ ಒಂದು ವರ್ಷವಾಗಿದ್ದು, ಮಾಸಿಕ ಸಂಭಾವನೆ ರೂ.1,40,937/- ನಿಗಧಿಪಡಿಸಲಾಗಿದೆ. ಅಭ್ಯರ್ಥಿಯ ವಯೋಮಿತಿ 40 ವರ್ಷದೊಳಗಿರಬೇಕು. ಉತ್ತಮ ದಾಖಲೀಕರಣ, ಸಂವಹನ ಕೌಶಲ್ಯ, ಮಾಹಿತಿ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ, ಬಳಕೆ ಹಾಗೂ ಪೂರೈಕೆ, ಉತ್ತಮ ಕನ್ನಡ ಭಾಷಾಜ್ಞಾನ, ನಿರ್ವಹಣೆ ಜ್ಞಾನ, ವ್ಯವಹಾರ ಪ್ರಕ್ರಿಯೆಯ ಯಂತ್ರಶಾಸ್ತ್ರ, ವ್ಯವಸ್ಥೆಯ ಬದಲಾವಣೆ ಮತ್ತು ಮಾನವ ಸಂಪನ್ಮೂಲ ಜ್ಞಾನದ ಕೌಶಲ್ಯವನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್: www.sakala.kar.nic.in      ನಲ್ಲಿ ಮಾಹಿತಿ ಪಡೆಯಬಹುದಾಗಿದೆ.    ಕೊಠಡಿ ಸಂಖ್ಯೆ : 104, ಗೇಟ್-01, ಬಹುಮಹಡಿ ಕಟ್ಟಡ, ಬೆಂಗಳೂರು-560001 ಹಾಗೂ ನಿಗಧಿತ ಅರ್ಜಿ ನಮೂನೆಗಳನ್ನು          aosakala@karnataka.gov.in    ಗೆ ಇ-ಮೇಲ್ ಮೂಲಕ ಕಳುಹಿಸಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *