ಮಧುಗಿರಿ: ಕನ್ನಡ ಬಾವುಟ ಸುಟ್ಟ ಆರೋಪಿಗಳನ್ನು ಬಂದಿಸುವಂತೆ ಮನವಿ

 ಮಧುಗಿರಿ : ಪಟ್ಟಣದ  ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಜಾಗೃತಿ ವೇದಿಕೆ ಮಧುಗಿರಿ ತಾಲೂಕು ಘಟಕ ವತಿಯಿಂದ ನಾಡಧ್ವಜ ಕನ್ನಡ ಬಾವುಟವನ್ನು ಸುಟ್ಟ ಆರೋಪಿಗಳನ್ನು ಬಂದಿಸುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿ ವೈ ರವಿ ರವರಿಗೆ ಮನವಿ ಪತ್ರ ನೀಡಲಾಯಿತು.

ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್ ಮತ್ತು ಶಿವಸೇನೆಯ ಪುಂಡರು ನಾಡಧ್ವಜ ಕನ್ನಡ ಬಾವುಟವನ್ನು ಸುಟ್ಟಿರುತ್ತಾರೆ, ಇಂತಹ ಕಿಡಿಗೇಡಿಗಳ ಮೇಲೆ ಸರಕಾರ ರಾಜ್ಯದಲ್ಲಿ ನಿಷೇಧಿಸಬೇಕು ಮತ್ತು ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ಈ ಕರ್ತವ್ಯಸಗಿದ ಶಿವಸೇನೆ ಮತ್ತು ಎಂ.ಇ.ಎಸ್ ಪುಂಡರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು, ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ಉಪಾಧ್ಯಕ್ಷ. ಪ್ರಸಾದ್, ಸಂಘಟನೆ ಕಾರ್ಯದರ್ಶಿ. ಶಿವಲಿಂಗಯ್ಯ, ಕನ್ನಡ ಜಾಗೃತಿ ವೇದಿಕೆ ಮಹಿಳಾ ಘಟಕ ಅಧ್ಯಕ್ಷ ರಾಮಾಂಜಿನಮ್ಮ, ನಗರಾಧ್ಯಕ್ಷೆ ರತ್ನಮ್ಮ, ಐಡಿಹಳ್ಳಿ ಬಾಲು, ರಾಜು ರೋಹಿತ್, ಮಹೇಶ್, ಇಲಿಯಸ್, ಪ್ರಭು ಮುತ್ತಾದವರು ಹಾಜರಿದ್ದರು.

Leave a Reply

Your email address will not be published. Required fields are marked *