ಕ್ಷೇತ್ರದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ರಾಜಣ್ಣ ಅವರನ್ನು ಆಯ್ಕೆ ಮಾಡಿ: ಆರ್.ರಾಜೇಂದ್ರ

 ಮಧುಗಿರಿ – ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಕೆ.ಎನ್.ರಾಜಣ್ಣ ಅವರನ್ನು ಆಯ್ಕೆ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.

ತಾಲೂಕಿನ ಗಂಜಲಗುಂಟೆ ಗ್ರಾಮದ ಸಮೀಪ ಕೆ.ಎನ್.ಆರ್. ಅಭಿಮಾನಿ ಬಳಗ , ಆರ್.ಆರ್ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ತಲಪುರಿಗೆ ಕಾಲುವೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2015 ರಲ್ಲಿ ಬಿಜವಾರ  ಕೆರೆ ತುಂಬಿದಾಗ ಶಾಸಕರಾಗಿದ್ದ ಕೆ.ಎನ್.ರಾಜಣ್ಣ ನವರು ಈ ಕಾಲುವೆಯನ್ನು ದುರಸ್ಥಿ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಇದೀಗ ಮತ್ತೆ ಬಿವರ ಕೆರೆ ಕೋಡಿ ಬಿದ್ದಿದ್ದು, ಇದರಿಂದ ಕಾಲುವೆಗಳಲ್ಲಿ ನೀರು ಹರಿದರೆ ತಲಪುರಿಗೆಗಳು ತುಂಬಲಿದೆ ಎಂದು ತಿಳಿಸಿದರು.

ಕೆ.ಎನ್.ರಾಜಣ್ಣನವರು ಶಾಸಕರಾಗಿದ್ದ ಕಾಲದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಕಣ್ಮುಂದೆ ಇದೆ. 2023 ರ ಚುನಾವಣೆಯಲ್ಲಿ ಅವರನ್ನು ಶಾಸಕರನ್ನಾಗಿಸಿ ಎಂದು ಮನವಿ ಮಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವುದು ನಿಶ್ಚಿತ ರಾಜಣ್ಣನವರು ಮಂತ್ರಿಯಾಗುವುದು ಖಚಿತ ಎಂದು ಭವಿಷ್ಯ ನುಡಿದರು.

ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮನಸ್ತಾಪಗಳನ್ನು ಬದಿಗಿಟ್ಟು ಗ್ರಾಮಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಿಕೊಂಡು ಒಗ್ಗಟ್ಟಾಗಿ ಇದ್ದರೆ ಗ್ರಾಮಗಳು ಅಭಿವೃದ್ದಿ ಹೊಂದಲಿವೆ ಎಂದ ಅವರು, ಕೋವಿಡ್ ಕಷ್ಟ ಕಾಲದಲ್ಲಿ ಈ ಭಾಗದಲ್ಲಿ À ವಿಎಸ್ಸೆಸ್ಸೆನ್ ಮೂಲಕ 10 ಕೋಟಿ ರೂ ಗಳವರೆಗೂ ರೈತರಿಗೆ ಸಾಲವನ್ನು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜಗೋಪಾಲ್, ಗಂಜಲಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಡಿ.ಹೆಚ್.ನಾಗರಾಜು, ಎಪಿಎಂಸಿ ಮಾಜಿ ಮಾಜಿ ಅಧ್ಯಕ್ಷೆ ಮರಿಯಣ್ಣ, ವಿಎಸ್ಸೆಸ್ಸೆನ್ ಅಧ್ಯಕ್ಷ ಪಾಜೀಲ್, ಗ್ರಾಪಂ ಉಪಾಧ್ಯಕ್ಷೆ ಚೇತನಾ, ಸದಸ್ಯರುಗಳಾದ ಮಾಲಾ, ನಾಗಭೂಷಣ, ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ, ರಂಗರಾಜು, ಅಮರಾವತಿ ದಾಸೇಗೌಡ, ವೀರೇಶ್, ಭಕ್ತರಹಳ್ಳಿ ವೀರನಾಗಪ್ಪ, ಜಿ.ಎನ್.ರವಿ, ತಿಮ್ಮಣ್ಣ, ಕೆ.ರಮೇಶ್, ಪಟೇಲ್ ರಾಮಣ್ಣ, ಬ್ಯಾಂಕ್ ರಾಮಚಂದ್ರಪ್ಪ, ಎಚ್.ಎಸ್.ನಾಗಭೂಷಣ, ರಂಗರಾಜು ಹಾಗೂ ಮುಂತಾದವರು ಇದ್ದರು.

Leave a Reply

Your email address will not be published. Required fields are marked *