ಬಳ್ಳಾರಿ : ಪುನಿತ್ ರಾಜ್‌ಕುಮಾರ್ ಸ್ಮರಣೆ ಪ್ರಯುಕ್ತ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅನ್ನದಾನ

ಬಳ್ಳಾರಿ.ಜ.02: ಬಳ್ಳಾರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನ್ನಡ ರತ್ನ, ನಟ ದಿವಂಗತ ಪುನಿತ್ ರಾಜ್‌ಕುಮಾರ್ ಸ್ಮರಣೆ ಪ್ರಯುಕ್ತ ಗಾಂಧಿಜೀ ತರಕಾರಿ ಸಗಟು ವ್ಯಾಪಾರಸ್ಥರ ಸಂಘ, ಎ.ಪಿ.ಎಂ.ಸಿ ಬಳ್ಳಾರಿ ಇವರು ನಟ ಪುನೀತ್ ರಾಜ್‌ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸಿ ಅನ್ನದಾನ ಕಾರ್ಯಕ್ರಮವನ್ನು ನೆರವೇರಿಸಿದರು. 

ಮುಂಜಾನೆ ಆರು ಗಂಟೆಯಿAದ ಹತ್ತು ಗಂಟೆಯವರೆಗೂ ಮಾರುಕಟ್ಟೆಗೆ ಬಂದು ಹೋಗುವ ವ್ಯಾಪರಸ್ಥರಿಗೆ, ರೈತರಿಗೆ ಮತ್ತು ಹಮಾಲರು ಮತ್ತು ನಿರ್ಗತಿಕರಿಗೆ ಅನ್ನ ಸಂತರ್ಪಣೆ ಮಾಡಿದರು. ಸಂಘದ ಗೌರವ ಅಧ್ಯಕ್ಷರಾದ ದಿನೇಶ್ ಮತ್ತು ಅಧ್ಯಕ್ಷರಾದ ಗೋವಿಂದರಾಜುಲುರವರು ಮಾತನಾಡುತ್ತಾ, ನಟ ಪುನೀತ್ ರವರು ಸದಭಿರುಚಿಯ ಮತ್ತು ಕುಟುಂಬ ಸಮೇತವಾಗಿ ನೋಡಬಹುದಾದಂತಹ ಚಿತ್ರಗಳಲ್ಲಿ ಅಭಿನಯಿಸುತ್ತಾ ಅವರ ಅಭಿಮಾನಿಗಳಿಗೆ ಮತ್ತು ಸಮಾಜಕ್ಕೆ ಮಾಧರಿಯಾಗಿದ್ದರು. ಹಾಗೂ ಅವರು ಕೈಗೊಂಡ ಅನೇಕ ಸಾಮಾಜಿಕ ಕಾರ್ಯಗಳಿಂದ ನೆನೆಯುವ ನಟನಾಗಿ ದಕ್ಷಿಣ ಕರ್ನಾಟಕದ ಯೂತ್ ಐಕಾನ್ ಆಗಿ ಮನೆ ಮಾತಾಗಿದ್ದರು. 

ಸಂಘದ ಗೌರವ ಅಧ್ಯಕ್ಷರಾದ, ದಿನೇಶ್‌ಕುಮಾರ್ ಮಾತನಾಡಿ ಯಾವುದೇ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಅಭಿನಯಿಸಿದೇ ದೇಶ ಹಾಗೂ ವಿಶ್ವದಾಧ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಅಲ್ಲದೆ ಮನುಷ್ಯ ಜೀವನದಲ್ಲಿ ಸಮಾಜಕ್ಕೆ ಯಾವ ರೀತಿ ಸಹಕಾರಿಯಾಗಿ ಬದುಕ ಬೇಕೆಂಬುದನ್ನು ತೋರಿಸಿಕೊಟ್ಟ ಅವರನ್ನು ನೆನೆಯುವುದು ಕನ್ನಡಿಗರ ಕರ್ತವ್ಯವಾಗಿದೆ. ಅವರು ಮತ್ತೊಮ್ಮೆ ಕರ್ನಾಟಕದಲ್ಲಿ ಹುಟ್ಟಿ ಬರಲಿ ಎಂದು ಜ್ಞಾಪಿಸಿಕೊಂಡರು. 

ಈ ಸಂದರ್ಭದಲ್ಲಿ ಸಂಘದ ಪಧಾದಿಕಾರಿಗಳಾದ ಉಪಾಧ್ಯಕ್ಷ ಅನೀಫ್,ಪ್ರಧಾನ ಕಾರ್ಯಧರ್ಶಿ,ವರದಿಗಾರರಾದ ಪಂಪನಗೌಡ, ಖೋಶಾಧಿಕಾರಿ ಮಹಮ್ಮದ್,ಕೆ.ಪಿ ಹಸೇನ್, ಪಾಲಾಕ್ಷಿ, ನಾಗರಾಜ್, ರವಿ, ಶಿವ, ರಾಜು, ನವೀನ್, ಅಂಕುಲ್,ಪುಟ್ಟ,ಹಚ್ಚೊಳ್ಳಿ ಬಾಬು,ಶೀನ,ಆದಿನಾರಾಯಣ ಸೇರಿದಂತೆ ಅಪ್ಪುರವರ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *