ಅನಿರ್ಧಿಷ್ಟಾವಧಿ ಕಾಲದವರೆಗೆ ಪರೀಕ್ಷೆ ಮುಂದೂಡಿಕೆ

 ಕನ್ನಡ ಸಾಹಿತ್ಯ ಪರಿಷತ್ತು 2021-22ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು 2022 ಜನವರಿ 21, 22 ಮತ್ತು 23ರಂದು ಒಟ್ಟು 3 ದಿನಗಳ ಕಾಲ ರಾಜ್ಯದ 19 ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು ಈಗಾಗಲೇ ಈ ಸಂಬ0ಧ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ದಿನಾಂಕ  04-01-2022ರಂದು ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್-19ರ ಮಾರ್ಗಸೂಚಿಯಂತೆ ಹಾಗೂ ವಾರಂತ್ಯದ ಕರ್ಪ್ಯೂ ಜಾರಿಯಲ್ಲಿರುವಂತೆ ನಿಗಧಿತ ದಿನಾಂಕದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕವನ್ನು ಅನಿರ್ಧಿಷ್ಟಾವಧಿ ಕಾಲದವರೆಗೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18. ಇವರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ : 9448686338 / 080-26623584 / 26612991 

ಅಂತರ್ಜಾಲ ತಾಣ www.kasapa.in   ಮೂಲಕ ಸಹ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. 

Leave a Reply

Your email address will not be published. Required fields are marked *