ವಿಶ್ವದಾದ್ಯಂತ ಜನ ಮನ ಗೆದ್ದ ಶ್ರೀ ಜಗನ್ನಾಥದಾಸರು ಚಲನಚಿತ್ರ

 “ವಿಶ್ವದಾದ್ಯಂತ ಜನ ಮನ ಗೆದ್ದ ಶ್ರೀ ಜಗನ್ನಾಥದಾಸರು ಚಲನಚಿತ್ರ.”

ದಿನಾಂಕ 05-01-2022 ರಂದು ಬೆಂಗಳೂರಿನ ಹೊರವಲಯದ ಪೂರ್ಣಪ್ರಮತಿ ಗುರುಕುಲ, ಆನಂದವನದಲ್ಲಿ  ಶ್ರೇ ವಿಶ್ವೇಶತೀರ್ಥರ ದ್ವಿತೀಯ ಮಹಾಸಮಾರಾಧನಾ ಮಹೋತ್ಸವ ಮತ್ತು ಶ್ರೀ ಜಗನ್ನಾಥ ದಾಸರು ಚಲನಚಿತ್ರ ತಂಡದವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವು ಭೇಮನಕಟ್ಟೆ ಶ್ರೀ  ರಘುವರೇಂದ್ರತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮೈಸೂರು  ರಾಮಚಂದ್ರಾಚಾರ್ಯರು ಮತ್ತು ಶ್ರೀ ಜಗನ್ನಾಥದಾಸರು ಚಲನಚಿತ್ರದ ತಂಡದವರು ಉಪಸ್ಥಿತರಿದ್ದರು. 

ಶ್ರೀ ರಘುವರೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಆಶೀರ್ವಚನದಲ್ಲಿ ಶ್ರೀ ಜಗನ್ನಾಥ ದಾಸರು ಚಿತ್ರದ ತಂಡಕ್ಕೆ ಶುಭಕೋರಿದರು. 

 ಶ್ರೀ ಜಗನ್ನಾಥದಾಸರು  ಚಿತ್ರದ ನಿರ್ಮಾಪಕರು ಮತ್ತು ಶ್ರೀ ವಿಜಯದಾಸರ ಪಾತ್ರಧಾರಿ ಶ್ರೀ ತ್ರಿವಿಕ್ರಮ ಜೋಶಿ ಅವರು ಚಿತ್ರದ ಕುರಿತು ಮತ್ತು ತಮಗಾದ ಅನುಭವದ ಕುರಿತು ಮಾತನಾಡಿದರು. ಮುಂದಿನ ದಿನಗಳಲ್ಲಿ ಹರಿದಾಸರ ಇನ್ನು ಹೆಚ್ಚಿನ ಚಿತ್ರಗಳು ಮಾಡುವ ಸಂಕಲ್ಪ ಇರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಜಗನ್ನಾಥದಾಸರ ಪಾತ್ರ ನಿರ್ವಹಿಸಿದ ಶ್ರೀ ಶರತ್ ಜೋಶಿಯವರು, 

 ಶ್ರೀ ಗೋಪಾಲದಾಸರ ಪಾತ್ರ ನಿರ್ವಹಿಸಿದ ಶ್ರೀ ಪ್ರಭಂಜನ್ ದೇಶಪಾಂಡೆಯವರು  ಹಾಗು ಜಗನ್ನಾಥದಾಸರ ತಾಯಿ ಪಾತ್ರ ನಿರ್ವಹಿಸಿದ ಶ್ರೀಮತಿ ಪದ್ಮಕಲಾ ಅವರು ಉಪಸ್ಥಿತರಿದ್ದರು. ಎಲ್ಲಾ ಕಲಾವಿದರನ್ನು ನೋಡಿ ಜನರು ಸಾಕ್ಷಾತ್ ದಾಸರುಗಳನ್ನೇ ನೋಡಿದ ಅನುಭವ ವ್ಯೆಕ್ತಪಡಿಸಿದರು. ಚಿತ್ರವನ್ನು ನೋಡಿದ ಅನೇಕರು ತಂಡದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತೀರ್ಥ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.  

ಶ್ರೀ ಜಗನ್ನಾಥದಾಸರ ಚಿತ್ರತಂಡದೊಂದಿಗೆ ಕೆಲವು ಸಮಯ ಕಳೆದ ಜನರು ತುಂಬಾ ಪ್ರೀತಿ, ಅಭಿಮಾನದಿಂದ ತಂಡವನ್ನು ಬೀಳ್ಕೊಟ್ಟರು.

Leave a Reply

Your email address will not be published. Required fields are marked *