ಓದುಗರತ್ತ ಹೆಜ್ಜೆ ಹಾಕಲು ಹೊಸ ಪುಸ್ತಕಗಳು ಸಜ್ಜು

ಸ್ನೇಹಿತರೆ, 

‘ಚಂದ್ರಮಾನೆ’ ಕಾದಂಬರಿ, ‘ಸಾಹಿತ್ಯ ಮತ್ತು ಸಮಾಜ’ ನನ್ನ ಎರಡು ಹೊಸ ಪುಸ್ತಕಗಳು ಮೊದಲ ಹಂತವಾಗಿ ಸೋಮವಾರದಿಂದ ಓದುಗರತ್ತ ಹೆಜ್ಜೆಯಿಡಲು ಸಜ್ಜುಗೊಂಡಿವೆ. 

ಮುದ್ರಣ ಮನೆಯಿಂದ ಬಂದ ಮೂರು ದಿನಗಳಿಂದ ಲೇಖಕ ಮತ್ತು ಪ್ರಕಾಶಕನಾದ ನಾನು ಇದೇ ಕಾರ್ಯದಲ್ಲಿ ಮಗ್ನನಾಗಿದ್ದೇನೆ.

ಒಂದು ರೀತಿ ನಮ್ಮ ಮನೆ ಸಂಕ್ರಾಂತಿಯ ಹಬ್ಬವನ್ನು ಪುಸ್ತಕಗಳ ಮೂಲಕವೇ ಆಚರಿಸಿದೆ. 

ಇದೇ ಪುಸ್ತಕಗಳ ಧ್ಯಾನ, ಹಬ್ಬದಲ್ಲಿ ಇದ್ದಾಗಲೇ ಬಳ್ಳಾರಿಯ ವಾಸುಕಿ ಪುಸ್ತಕಾಲಯದ ಶ್ರೀನಾಥ್ ಜೋಷಿ ಅವರು ಫೇಸ್ ಬುಕ್ ನಲ್ಲಿ ನೋಡಿ ನನ್ನ ಹೊಸ ಪುಸ್ತಕಗಳಿಗೆ ಆರ್ಡರ್ ಮಾಡಿದ್ದಾರೆ. ಇದು ನಮಗೆ ಮೊದಲ ಸಂಭ್ರಮ.

ಮತ್ತೆ ಬುಕ್ ಬ್ರಹ್ಮದಿಂದ ಭಾಗ್ಯ ಮೇಡಂ ಫೋನ್ ಮಾಡಿ ಪುಸ್ತಕಗಳ ಮಾಹಿತಿ ಪಡೆದಿದ್ದಾರೆ. ಬುಕ್ ಬ್ರಹ್ಮ ಸಂಪಾದಕರಾದ ದೇವು ಪತ್ತಾರ್ ಅವರ ಈ ಬಗೆಯ ಕಾಳಜಿಗೆ ಕೃತಜ್ಞತೆ ಹೇಳಲೇಬೇಕು.  ಇದು ಹಬ್ಬದ ಸಂದರ್ಭದಲ್ಲೇ ದೊರೆತ ಎರಡನೇ ಖುಷಿ. 

ಇನ್ನು ಸಪ್ನ, ನವಕರ್ನಾಟಕ, ಟೋಟಲ್ ಕನ್ನಡ, ಅಂಕಿತ, ಬುಕ್ ಮಾಡಿ.ಕಾಮ್ ಪುಸ್ತಕ ಮಾರಾಟ ಕೇಂದ್ರಗಳಿಗೂ ಸದ್ಯದಲ್ಲೇ ತಲುಪಿಸುವ ವ್ಯವಸ್ಥೆಯಾಗುತ್ತಿದೆ. 

ಈಗ ನಿಮ್ಮ ಕಡೆ ಪುಸ್ತಕಗಳು ಬರಲು ಹೊರಟಿದ್ದು, ಆ ಓದುಗರ ಪೈಕಿ ನೀವೂ ಒಬ್ಬರಾಗಿರಬಹುದು. ಸ್ವೀಕರಿಸಿ, ನಿಮ್ಮ ಅಭಿಪ್ರಾಯ ತಿಳಿಸಿ. 

-ಕಗ್ಗೆರೆ ಪ್ರಕಾಶ್

9242744854 / 9663412986

Leave a Reply

Your email address will not be published. Required fields are marked *