ಪ್ರಜಾಪಿತ ಬ್ರಹ್ಮಾ

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ನಿರಾಕಾರ ಪರಮಪಿತ ಪರಮಾತ್ಮನಿಂದ ಪ್ರಜಾಪಿತ ಬ್ರಹ್ಮಾ ಅವರ ಸಾಕಾರ ಮಾಧ್ಯಮದ ಮೂಲಕ 1937ರಲ್ಲಿ ಸಿಂಧ್ ಹೈದರಾಬಾದ್‌ನಲ್ಲಿ ಸ್ಥಾಪಿಸಲ್ಪಟ್ಟಿತು. 1950ರಲ್ಲಿ ಇದು ಭಾರತದ ಆಬುಪರ್ವತಕ್ಕೆ ಸ್ಥಳಾಂತರಗೊ0ಡಿತು. ವರ್ತಮಾನ ಸಮಯದಲ್ಲಿ ತನ್ನ 8500  ಶೈಕ್ಷಣಿಕ ಸೇವಾಕೇಂದ್ರಗಳ ಮೂಲಕ 137 ದೇಶಗಳಲ್ಲಿ ಈಶ್ವರೀಯ ಜ್ಞಾನ ಮತ್ತು ಸಹಜ ರಾಜಯೋಗ ಶಿಕ್ಷಣವನ್ನು ಕಲಿಸಿ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡಲು ಸೇವಾನಿರತವಾಗಿದೆ. ಬ್ರಹ್ಮಾಬಾಬಾರವರ ಮೂಲಕ ಸ್ವಯಂ ಪರಮಾತ್ಮನೇ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನೀಡಿರುವ ಆಧ್ಯಾತ್ಮಿಕ ಶಿಕ್ಷಣ ಲಕ್ಷಾಂತರ ಜನರಿಗೆ ನವಜೀವನ ನೀಡಿದೆ. ಇದು ಕೇವಲ ಒಬ್ಬರ ಅನುಭವವಲ್ಲದೆ, ಸುಮಾರು 11 ಲಕ್ಷ ನಿತ್ಯ ವಿದ್ಯಾರ್ಥಿಗಳ ಅನುಭವವಾಗಿದೆ.  

ವಿಶ್ವದಲ್ಲಿ ಮಹಾನ್ ವ್ಯಕ್ತಿತ್ವ ಹೊಂದಿದ `ದಾದಾ ಲೇಖರಾಜ’ ಅವರ ಜನ್ಮವು 1876ರಲ್ಲಿ ಸಿಂಧ್ ಹೈದರಾಬಾದ್‌ನ ಕೃಪಲಾನಿ ಕುಲದಲ್ಲಿ ವಲ್ಲಭಾಚಾರಿ ಭಕ್ತರ ಮನೆಯಲ್ಲಿ ಆಯಿತು.  ಇವರ ತಂದೆಯವರು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಆದರೆ ಲೇಖರಾಜರವರು ತಮ್ಮ ಚಾರಿತ್ರö್ಯ, ಬುದ್ಧಿಚಾತುರ್ಯ ಹಾಗೂ ದೃಢಪ್ರಯತ್ನದಿಂದ ಗೋಧಿ ಮಾರುವ ಸಾಮಾನ್ಯ ವ್ಯಾಪಾರಿಯಿಂದ ಒಬ್ಬ ಪ್ರಸಿದ್ಧ ವಜ್ರದ ವ್ಯಾಪಾರಿಯಾದರು. ತಮ್ಮ ಈ ವ್ಯಾಪಾರದಿಂದಾಗಿ ಅವರು ನೇಪಾಳದ ರಾಜಕುಲ, ಉದಯಪುರದ ಮಹಾರಾಜ, ವೈಸ್‌ರಾಯ್‌ರು ಮತ್ತು ಧನಾಢ್ಯ ವ್ಯಕ್ತಿಗಳೊಡನೆ ನಿಕಟವಾದ ಸಂಪರ್ಕವನ್ನಿಟ್ಟುಕೊ0ಡಿದ್ದರು. ಜನರು ಇವರನ್ನು ಪ್ರೀತಿಯಿಂದ `ದಾದಾ’ ಎಂದು ಕರೆಯುತಿದ್ದರು. ಆದರೆ ನಿರಾಕಾರ ಪರಮಾತ್ಮನು ಪರಕಾಯ ಪ್ರವೇಶಿಸಿದ ನಂತರ ಅವರು `ಪ್ರಜಾಪಿತ ಬ್ರಹ್ಮಾ’ರಾದರು. 

ಪರಮಾತ್ಮನ ಸಾಕಾರ ಮಾಧ್ಯಮವಾಗಿದ್ದ ದಾದಾರವರು ಸಾಧಾರಣ ಮಾನವರಾಗಿದ್ದರೂ ಎಲ್ಲಾ ದೃಷ್ಟಿಕೋನದಿಂದಲೂ ಉತ್ತಮ ಹಾಗೂ ಅದ್ಭುತ ವ್ಯಕ್ತಿಯಾಗಿದ್ದರು. ಬಾಬಾರವರ ಚಿತ್ರ ಮತ್ತು ಚರಿತ್ರೆಗಳೆರಡೂ ಸುಂದರವಾಗಿದ್ದವು. ಅವರು ಸಾಕ್ಷಾತ್ ದೇವತಾ ಸ್ವರೂಪರಾಗಿದ್ದರು. ಅವರನ್ನು ನೋಡಿದಾಗ ಅನೇಕರಿಗೆ ಶ್ರೀಕೃಷ್ಣನ ಸಾಕ್ಷತ್ಕಾರವಾಗುತ್ತಿತ್ತು. ಬಾಬಾರವರು ಮಹಾನ್ ಭಕ್ತರಾಗಿದ್ದರು. ಅವರು ನಿಯಮ ಮತ್ತು ನೀತಿಗಳನ್ನು ಉಲ್ಲಂಘಿಸಿ ಯಾವ ಕರ್ಮಗಳನ್ನೂ ಮಾಡುತ್ತಿರಲಿಲ್ಲ. ಬಾಬಾರವರಿಗೆ ಲೌಕಿಕ ಗುರುಗಳಲ್ಲಿ ಅಪಾರವಾದ ನಂಬಿಕೆ ಇತ್ತು. ಸದ್ಗುರು ಪರಮಾತ್ಮನ ಆಜ್ಞೆಯನ್ನು ಅವರು ಸಂಪೂರ್ಣವಾಗಿ ಪಾಲನೆ ಮಾಡುತ್ತಿದ್ದರು.

ದಾದಾರವರಿಗೆ ಒಂದು ದಿನ ಮುಂಬೈನಲ್ಲಿರುವ ಬಬುಲನಾಥ ಮಂದಿರದ ಪಕ್ಕದಲ್ಲಿದ್ದ ತಮ್ಮ ಮನೆಯಲ್ಲಿ ಅತೀಂದ್ರಿಯ ಸುಖದ ಅನುಭವವಾಗತೊಡಗಿತು. ಆಗ ಅವರಿಗೆ ಚತುರ್ಭುಜ ವಿಷ್ಣುವಿನ  ದಿವ್ಯ ಸಾಕ್ಷತ್ಕಾರವಾಯಿತು. ಸ್ವಲ್ಪ ಕಾಲದ ನಂತರ ದಾದಾರವರು ವಾರಾಣಾಸಿಗೆ ಹೋದರು.  ಅಲ್ಲಿಯೂ ಸಹ ಏಕಾಂತದಲ್ಲಿ ಕುಳಿತು ಪ್ರಭು-ಚಿಂತನೆ ಮಾಡುವಾಗ ಅನೇಕ ದಿವ್ಯ ಸಾಕ್ಷಾತ್ಕಾರ ಹಾಗೂ ವಿಚಿತ್ರ ಅನುಭವಗಳಾದವು. ಕ್ರಮೇಣ ದಾದಾರವರಿಗೆ ಪರಮಾತ್ಮನೇ ದಿವ್ಯಬುದ್ಧಿ, ದಿವ್ಯದೃಷ್ಟಿದಾತನೆಂದು ಸ್ಪಷ್ಟವಾಯಿತು. ಒಂದು ದಿನ ದಾದಾರವರಿಗೆ ನಿರಾಕಾರ ಜ್ಯೋತಿರ್ಬಿಂದು ಶಿವನ ಮತ್ತು ಕಲಿಯುಗಿ ಸೃಷ್ಟಿಯ ಮಹಾವಿನಾಶದ ಸಾಕ್ಷಾತ್ಕಾರವಾಯಿತು. ಅಮೇರಿಕಾ ಮತ್ತು ಯೂರೋಪಿಯನ್ನರು ಭಯಂಕರವಾದ ಅಣುಬಾಂಬುಗಳ ಮೂಲಕ ವಿನಾಶ ಮಾಡುತ್ತಿದ್ದುದ್ದನ್ನು ಅವರು ಕಂಡರು. ಆ ಸಮಯದಲ್ಲಿ  ಇನ್ನು ಅಣುಬಾಂಬುಗಳ ರಚನೆ ಆಗಿರಲಿಲ್ಲ. ತದನಂತರ ದಾದಾರವರು ತಮ್ಮ ವಜ್ರದ ವ್ಯಾಪಾರವನ್ನು ಬಿಟ್ಟು ತಮ್ಮ ಪಾಲಿನ ಹಣವನ್ನು ಈಶ್ವರನ ಸೇವೆಗೆ ಸಮರ್ಪಣೆ ಮಾಡಿದರು. ಕ್ರಮೇಣ ದಾದಾರವರಿಗೆ ತಮ್ಮ ಶರೀರದಲ್ಲಿ ನಿರಾಕಾರ ಪರಮಪಿತ ಪರಮಾತ್ಮ ಶಿವನೇ ಪ್ರವೇಶಿಸಿ ತನ್ನ ದಿವ್ಯ e್ಞÁನವನ್ನು, ಸತ್ಯಯುಗಿ ಸೃಷ್ಟಿಯ ಸ್ಥಾಪನೆಗಾಗಿ ನೀಡುತ್ತಿದ್ದಾನೆ ಎಂಬ ವಿಚಾರವು ಸ್ಪಷ್ಟವಾಯಿತು. ನಿರಾಕಾರ ಪರಮಾತ್ಮ ಶಿವನು ದಾದಾರವರ ಶರೀರದಲ್ಲಿ ಪ್ರವೇಶ ಮಾಡಿ ನರ-ನಾರಿಯರ ಆಹಾರ-ವಿಹಾರ, ವ್ಯವಹಾರ, ದೃಷ್ಟಿ-ವೃತ್ತಿಗಳನ್ನು ಶುದ್ಧ ಮಾಡುತ್ತಾ ಅವರಿಗೆ ಆಧ್ಯಾತ್ಮಿಕ ಶಿಕ್ಷಣಕ್ಕಾಗಿ ವ್ಯವಸ್ಥೆ ಮಾಡಿದರು. ಹೀಗೆ ಸಿಂಧ್‌ನಲ್ಲಿ ಬಾಬಾರವರ ನೇತೃತ್ವದಲ್ಲಿ `ಓಂ ಮಂಡಳಿ’ ಎಂಬ ಹೆಸರಿನಲ್ಲಿ ಪ್ರಾರಂಭವಾದ ಸತ್ಸಂಗವು ಇಂದು ಈಶ್ವರೀಯ ವಿಶ್ವ ವಿದ್ಯಾಲಯವಾಗಿ 86 ವರ್ಷಗಳಿಂದ ಅಮೋಘ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.

ಬಾಬಾರವರ ವ್ಯಕ್ತಿತ್ವವು ಬಹಳ ಪ್ರಭಾವಶಾಲಿ ಆಗಿತ್ತು. “ಬೇಡುವುದಕ್ಕಿಂತ ಸಾಯುವುದು ಮೇಲು”  ಎಂಬ  ಪಾಠವನ್ನು ಅವರು ಎಲ್ಲ ಯಜ್ಞವತ್ಸರಿಗೂ ಕಲಿಸುತ್ತಿದ್ದರು. ರಾಜರಂತೆ ಶಿಷ್ಟಾಚಾರ, ಆತಿಥ್ಯ, ಉದಾರತೆ, ಸ್ವಚ್ಛತೆ ಮೊದಲಾದ ಗುಣಗಳನ್ನು ಬೆಳೆಸಿಕೊಳ್ಳಲು ಶಿಕ್ಷಣ ನೀಡುತ್ತಿದ್ದರು. ಸರ್ವರಲ್ಲಿ ಸ್ನೇಹವಿಡುವ, ಎಲ್ಲರ ಬಗ್ಗೆ ಕಲ್ಯಾಣದ ಭಾವನೆ ಇಟ್ಟುಕೊಳ್ಳುವ, ಎಲ್ಲ ಧರ್ಮದವರನ್ನು ತಮ್ಮವರೆಂದು ಭಾವಿಸುವ ಮತ್ತು ತಂದೆಯ ಪ್ರೇಮವನ್ನು ಪ್ರಕಟಿಸುವ ಸಂಸ್ಕಾರವನ್ನು ಬ್ರಹ್ಮಾ ಬಾಬಾರವರು ಹೊಂದಿದ್ದರು. ಭಾರತ ಮತ್ತು ವಿಶ್ವದ ಸೇವೆಗಾಗಿ ತಮ್ಮ ತನು-ಮನ-ಧನಗಳನ್ನು ಉಪಯೋಗಿಸಬೇಕೆಂದು ಮಕ್ಕಳಿಗೆ ಪ್ರೇರಣೆ ಕೊಡುತ್ತಿದ್ದರು. ಅವರು `ದಧಿಚಿ’ ಋಷಿಯಂತೆ ಯಜ್ಞದ ಸೇವೆಗೆ ಶರೀರವನ್ನೇ ಅರ್ಪಿಸಿದರು.  ಅವರು ಸ್ಥೂಲ ಶರೀರವನ್ನು ತತ್ವಗಳಲ್ಲಿ ವಿಲೀನ ಗೊಳಿಸಿದ ಸ್ಥಳದಲ್ಲಿ ನಿರ್ಮಿಸಲಾದ `ಶಾಂತಿ-ಸ್ತ0ಭ’ ಇವತ್ತಿಗೂ  ಪವಿತ್ರತೆ-ಶಾಂತಿಯ ಕಿರಣಗಳನ್ನು ಹೊರಚೆಲ್ಲುತ್ತಿದೆ. ಬಾಬಾರವರ ತ್ಯಾಗವೃತ್ತಿಯು ಅತ್ಯಂತ ಉನ್ನತ ಮಟ್ಟದ್ದಾಗಿತ್ತು. ಅವರು ಸಾಧಾರಣ ವಸ್ತಧಾರಿಗಳಾಗಿದ್ದರು. ಹೊಸ ಕಟ್ಟಡಗಳನ್ನು ನಿರ್ಮಿಸಿದ್ದರು, ಅವು ಮಕ್ಕಳಿಗಾಗಿ ಎಂದು ಹಳೆಯ ಕೋಣೆಯಲ್ಲಿ ವಾಸಿಸುತ್ತಿದ್ದರು. ಬಾಬಾರವರು ಎಲ್ಲ ಕಾರ್ಯಗಳಲ್ಲಿ ಮಕ್ಕಳನ್ನೇ ಮುಂದಿಡುತ್ತಿದ್ದರು. ಎಂತಹ ಅಸಾಧ್ಯವಾದ ಕಾರ್ಯವಾಗಿದ್ದರೂ ಬಾಬಾರವರು ನಿಶ್ಚಯ ಬುದ್ಧಿಯಿಂದ ಯೋಗಯುಕ್ತರಾಗಿ ಕಾರ್ಯವನ್ನು ಮಾಡಿ ಸಫಲರಾಗುತ್ತಿದ್ದರು. ಅವಗುಣಗಳನ್ನು ನೋಡಿದರೂ ಅವರನ್ನು ಗುಣಧಾರಿಗಳನ್ನಾಗಿ ಮಾಡಲು ಯತ್ನಿಸುತ್ತಿದ್ದರು.

ಬ್ರಹ್ಮಾರವರು ನೀಡಿರುವ ಸಂದೇಶ ‘ಮಧುರ ಮಕ್ಕಳೇ, ದೇಹಾಭಿಮಾನವನ್ನು ಬಿಟ್ಟು ಒಬ್ಬ ಪರಮಪಿತ ಶಿವನನ್ನು ನೇನಪು ಮಾಡಿ. ಎಕಂದರೇ ಆ ಪರಮಪಿತನ ಸ್ಮೃತಿಯಿಂದ ಅನೇಕ ಜನ್ಮಗಳ ಪಾಪಕರ್ಮಗಳು ಭಸ್ಮವಾಗುವುದು. ನರ-ನಾರಿಯರು ಸಂಪುರ್ಣ ಪವಿತ್ರರಾಗಿ ಸುಖ ಶಾಂತಿಯ ಸಾಮ್ರಾಜ್ಯದಲ್ಲಿ ನಾರಾಯಣ ಮತ್ತು ಲಕ್ಷಿö್ಮಯ ಪದವಿ ಪಡೆಯುವರು.’

‘ಮಧುರ ಮಕ್ಕಳೆ, ಈಗ ದೇಹದ ಧರ್ಮಗಳಿಂದ ದೂರಾಗಿ ಸ್ವಧರ್ಮದಲ್ಲಿ ಸ್ಥಿತರಾಗಿರಿ. ಹಿಂದು, ಮುಸಲಮಾನ, ಕ್ರಿಸ್ತ, ನರ-ನಾರಿ ಎಂಬ ದೇಹಾಭಿಮಾನ ತ್ಯಜಿಸಿ, ನಿಮ್ಮನ್ನು ನಿವು ಆತ್ಮ ಎಂದು ತಿಳಿದು, ಆ ಪರಮಪಿತನ ನೇನಪು ಮಾಡಿ, ಪವಿತ್ರ ಮತ್ತು ಯೋಗಿಗಳಾಗಿರಿ. ಈಗ ಕಲಿಯುಗದ ಅಂತಿಮ ಸಮಯವಿದೆ. ಕಲಿಯುಗಿ ಸೃಷ್ಟಿಯ ಮಹಾವಿನಾಶ ಸಮಿಪವಾಗಿದೆ.  ನಾವು ಎಲ್ಲರು ಅಶರಿರಿಗಳಾಗಿ ಪರಮಧಾಮ ಮನೆಗೆ ಹೋಗಬೇಕಾಗಿದೆ. ಅದ್ದರಿಂದ ವಿದೇಹಿಯಾಗಿ, ಅತ್ಮ ನಿಷ್ಚಯ ಮಾಡಿಕೋಳ್ಳಿರಿ. ಸತಯುಗಿ ಸೃಷ್ಟಿಯ ಪುನರ್ ಸ್ಥಾಪನೆ ಕಾರ್ಯದಲ್ಲಿ ಸಹಯೋಗಿಗಳಾಗಿರಿ’.

ಬಾಬಾರವರು 1969 ನೇ ಜನವರಿ 18 ರಂದು ಸ್ಥೂಲ ಶರೀರವನ್ನು ತ್ಯಜಿಸಿ ಸೂಕ್ಷö್ಮ ಶರೀರದಿಂದ ಇವತ್ತಿಗೂ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ದಿನವನ್ನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವಶಾಂತಿ ದಿನವೆಂದು ಆಚರಿಸಲಾಗುತ್ತದೆ.

 –ಬ್ರ.ಕು.ವಿಶ್ವಾಸ ಸೋಹೋನಿ.

 ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್, 9483937106

    

Leave a Reply

Your email address will not be published. Required fields are marked *