ಕೆಪಿಎಸ್ ಸಿ ಫಲಿತಾಂಶ ಶೀಘ್ರವೇ ಪ್ರಕಟಿಸಿ: ಮಾಜಿ ಸಚಿವ ಸುರೇಶ್ ಕುಮಾರ್

 ಕೆಪಿಎಸ್ ಸಿ ಫಲಿತಾಂಶ ಶೀಘ್ರವೇ ಪ್ರಕಟಿಸಿ: ಸಿಎಂ ಬೊಮ್ಮಾಯಿಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ

ಬೆಂಗಳೂರು: ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಇನ್ನೂ ಮೌಲ್ಯಮಾಪನ ಮಾಡಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎಸ್.ಸುರೇಶ್ ಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಿಲಿಮ್ಸ್ ಪರೀಕ್ಷೆ ಆಗಸ್ಟ್ 2020 ರಲ್ಲಿ ನಡೆಸಲಾಯಿತು ಮತ್ತು ಸುಮಾರು ಏಳು ತಿಂಗಳ ನಂತರ ಮುಖ್ಯ ಪರೀಕ್ಷೆಗಳನ್ನು ನಡೆಸಲಾಯಿತು, ಆದಾಗ್ಯೂ  ಕೆಪಿಎಸ್‌ಸಿ ಕಚೇರಿಯಲ್ಲಿ ಅಭ್ಯರ್ಥಿಗಳಿಗೆ ಇನ್ನೂ ಫಲಿತಾಂಶ ಲಭ್ಯವಾಗಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

11 ತಿಂಗಳು ಕಳೆದರೂ ವೌಲ್ಯಮಾಪನ ನಡೆಯದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಲೋಕಸೇವಾ ಆಯೋಗದ ಕಚೇರಿಗೆ ಭೇಟಿ ನೀಡಿದ ಅಭ್ಯರ್ಥಿಗಳಿಗೆ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ, ಮೌಲ್ಯಮಾಪನವೂ ಕೂಡ ನಡೆದಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಕೆಪಿಎಸ್‌ಸಿಯಲ್ಲಿ ಮೌಲ್ಯಮಾಪನಕ್ಕೆ ಪೂರ್ಣಾವಧಿ ಅಧಿಕಾರಿ ಇಲ್ಲ, ಪ್ರಸ್ತುತ ಪ್ರಭಾರದಲ್ಲಿರುವ ಅಧಿಕಾರಿ ಡೆಪ್ಯೂಟೇಶನ್‌ನಲ್ಲಿದ್ದಾರೆ ಎಂದು ಕುಮಾರ್ ಹೇಳಿದರು. ದಕ್ಷ ಸರ್ಕಾರಿ ಅಧಿಕಾರಿಗಳು ಅಗತ್ಯವೆಂದು ಆಗ್ರಹಿಸಿರುವ ಅವರು, ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶಗಳನ್ನು ಪ್ರಕಟಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು, ಅವರ ನೇಮಕಾತಿಗೆ ಶೀಘ್ರದಲ್ಲೇ ಫಲಿತಾಂಶಗಳನ್ನು ಪ್ರಕಟಿಸಬೇಕು ಎಂದು ಪತ್ರದಲ್ಲಿ  ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *