ತರಾಸು ಪ್ರಬಂಧಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು, ಜನವರಿ 18, (ಕರ್ನಾಟಕ ವಾರ್ತೆ) ಕರ್ನಾಟಕ ಸಾಹಿತ್ಯ ಅಕಾಡೆಮಿಯು ಫೆಬ್ರವರಿ ಮಾಹೆಯಲ್ಲಿ ತ.ರಾ.ಸು. ಅವರ ಬದುಕು-ಬರಹ ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು  ಹಮ್ಮಿಕೊಂಡಿದೆ.

ಈ ವಿಚಾರ ಸಂಕಿರಣದಲ್ಲಿ ಪರ್ಯಾಯ ಗೋಷ್ಠಿಗಳು ನಡೆಯಲಿದ್ದು, ಇದರಲ್ಲಿ ತ.ರಾ.ಸು. ಅವರ ಬದುಕು-ಬರಹ ಕುರಿತಾಗಿ ಪ್ರಬಂಧ ಮಂಡಿಸುವವರು ಅರ್ಜಿಯೊಂದಿಗೆ ಪ್ರಬಂಧವನ್ನು ಸಲ್ಲಿಸಬೇಕು. ಅರ್ಜಿಯೊಂದಿಗೆ ಪ್ರಬಂಧಗಳನ್ನು 29ನೇ ಜನವರಿ 2022ರೊಳಗೆ ಅಕಾಡೆಮಿಗೆ ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ನಿಬಂಧನೆಗೊಳಪಟ್ಟು ಸಲ್ಲಿಸಲು ಕೋರಿದೆ. ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ವೆಬ್‌ಸೈಟ್ http://sahithyaacademy.karnataka.gov.inಅನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Leave a Reply

Your email address will not be published. Required fields are marked *