2019-20ನೇ ಸಾಲಿನ ವಾರ್ಷಿಕ ಪರೀಕ್ಷೆಗಳ ಮುಂದೂಡಿಕೆ

ಬಳ್ಳಾರಿ ಜ 20. 2019-20ನೇ ಸಾಲಿನ ಎಂ.ಎ. ಪ್ರಥಮ ವರ್ಷ ಮತ್ತು ಸ್ನಾತಕೋತ್ತರ ಡಿಪ್ಲೊಮಾ/ಡಿಪ್ಲೊಮಾ ಕೋರ್ಸ್ಗಳ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳನ್ನು ದಿನಾಂಕ:27.01.2022 ರಿಂದ ದಿನಾಂಕ:31.01.2022ರವರೆಗೆ ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ಕೇಂದ್ರದಲ್ಲಿ ಹಾಗೂ ವಿಶ್ವವಿದ್ಯಾಲಯ ಅನುಮತಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆಗಳ ವೇಳಾಪಟ್ಟಿ ಅಧಿಸೂಚನೆ ಹೊರಡಿಸಲಾಗಿತ್ತು.

ಕೋವಿಡ್-19ರ 3ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಾರಾಂತ್ಯದ ಲಾಕ್‌ಡೌನ್/ಕರ್ಪ್ಯೂ ವಿಧಿಸುತ್ತಿದ್ದು, ಪರೀಕ್ಷೆ ಬರೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ಆರೋಗ್ಯದ ದೃಷಿಯಿಂದ ದಿನಾಂಕ:27.01.2022 ರಿಂದ 31.01.2022ರ ಬದಲಿಗೆ ದಿನಾಂಕ:07.02.2022 ರಿಂದ 11.02.2022ರವರೆಗೆ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು 2019-20ನೇ ಸಾಲಿನ ವಾರ್ಷಿಕ ಪರೀಕ್ಷೆಗಳ ಪರಿಷöತ ವೇಳಾಪಟ್ಟಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಡಾ.ಡಿ.ಮೀನಾಕ್ಷಿ ಉಪನಿರ್ದೇಶಕರು, ಮಾಹಿತಿಕೇಂದ್ರ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *