BREAKING NEWS: ಬೆಂಗಳೂರು ನಗರದ ಚಾಮಾರಾಜಪೇಟೆಯಲ್ಲಿ ಧಗ ಧಗನೆ ಉರಿದ ಬಿ.ಎಂ.ಟಿ.ಸಿ. ಬಸ್

ಬೆಂಗಳೂರು: ಬೆಂಗಳೂರು ನಗರದ ಚಾಮಾರಾಜಪೇಟೆಯಲ್ಲಿ ಬಿ.ಎಂ.ಟಿ.ಸಿ. ಬ¸ಸ್ಸಿಗೆ ಬೆಂಕಿ ತಗುಲಿ ಧಗಧಗನೆ ಉರಿದ ಘಟನೆ ವರದಿಯಾಗಿದೆ. ಬಸ್ ಸಂಚಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಉರಿದಿರುವ ಘಟನೆ ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ನಡೆದಿರುವುದಾಗಿ ವರದಿಯಾಗಿದೆ.

ಬಸ್ ಚಲಿಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಬಸ್‌ನಲ್ಲಿ 40 ಪ್ರಯಾಣಿಕರಿದ್ದರು, ಯಾವುದೇ ಸಾವು ನೋವು ಸಂಭವಿಸಿಲ್ಲ. ಬೇರೆ ಬಸ್‌ಗೆ ಶಿಫ್ಟ್ ಮಾಡಿ ಪ್ರಯಾಣಿಕರನ್ನು ಕಳಿಸಲಾಗಿದೆ. ಕೆ ಆರ್ ಮಾರ್ಕೆಟ್‌ಗೆ ಹೊರಟಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ

ಕ0ಡಕ್ಟರ್ ಬಾಕ್ಸ್ನಲ್ಲಿ ಇಡಲಾಗಿದ್ದ ಬಸ್ ಟಿಕೆಟ್ ಸುಟ್ಟು ಭಸ್ಮವಾಗಿವೆ. ಡ್ರೆöÊವರ್, ಕಂಡಕ್ಟರ್ ಬಸ್‌ಗೆ ಹತ್ತಿರುವ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದು. ಪೊಲೀಸರು ರಸ್ತೆ ಬಂದ್ ಮಾಡಿಸಿದ್ದಾರೆ. ಮಿನಿ ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸಲಾಗುತ್ತಿದೆ. 

Leave a Reply

Your email address will not be published. Required fields are marked *