ಸಮಾನತೆಯ ಬದುಕು ಸಾಗಿಸಲು ಅಂಬೇಡ್ಕರ್ ಸಂವಿಧಾನವೇ ಮೂಲ ಕಾರಣ

 ಮಧುಗಿರಿ : ಎಲ್ಲರೂ ಸಮಾನತೆಯಿಂದ ಬದುಕು ಸಾಗಿಸಲು ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನವೇ ಮೂಲ ಕಾರಣ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್. ಕೆಂಚಮಾರಯ್ಯ ಹೇಳಿದರು 

ತಾಲ್ಲೂಕಿನ ಐ ಡಿ ಹಳ್ಳಿ ಗ್ರಾಮದ ಸಂತೆ ಮೈದಾನದಲ್ಲಿ ಮಾನವ ಹಕ್ಕುಗಳ ರಕ್ಷಣಾ ವೇದಿಕೆ ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ನಾನು ಬಡತನದಿಂದ ಓದಿಕೊಂಡು ಗ್ರಾಮೀಣ ಭಾಗದ ಕೂಲಿ ಕೆಲಸ ಮಾಡುವ ಕುಟುಂಬದಿಂದ ಬಂದಿದ್ದು ನಾನು ಇಂದು ಕೆ.ಎ.ಎಸ್. ಅಧಿಕಾರಿ ಯಾಗಲು ಸಂವಿಧಾನವೇ ಮೂಲ ಕಾರಣವಾಗಿದ್ದು ಇಂದು ನಾನು ಅಧಿಕಾರಿ ಯಾಗಿದ್ದೇನೆ ಎಂದು ಎಲ್.ಸಿ.  ನಾಗರಾಜ್ ತಿಳಿಸಿದರು.

 ವಕೀಲ ತಿಪ್ಪಾಪುರ ಜಯಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು ,

ಮುಖ್ಯ ಭಾಷಣಕಾರರಾಗಿ ಜನ ಕಲೋಟಿ  ರಂಗಧಾಮಯ್ಯ ಆಗಮಿಸಿದ್ದರು,

ವಕೀಲ ಹಾಗೂ  ಮಾನವ ಹಕ್ಕುಗಳ ರಕ್ಷ ಣಾ ವೇದಿಕೆಯ ರಾಜ್ಯಾಧ್ಯಕ್ಷ  ಬಿ.ನರಸಿಂಹಮೂರ್ತಿ ಮಾತನಾಡುತ್ತಾ  ಕಾನೂನಿನ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಡಾ. ಮುಕುಂದಪ್ಪ , ತುಮಕೂರು ಮಾಜಿ ನಗರಸಭಾ ಸದಸ್ಯ ನರಸಿಯಪ್ಪ , ನಿವೃತ್ತ ಉಪನ್ಯಾಸಕ ರಾಮಣ್ಣ , ವಕೀಲರಾದ  ರಾಧಿಕಾಗಂಗಾಧರ್ ,ಮುಖಂಡರಾದ ಜಿಲಾನ್, ವಜೀರ್ ಬಾಷಾ ಪತ್ರಕರ್ತ  ಜಲಾಲ್ ಭಾಷಾ ,ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಶ್ರೀರಾಮಪ್ಪ ,  ಬಾಲಕೃಷ್ಣ ,ಉಪಸ್ಥಿತರಿದ್ದರು …

ಐ.ಡಿ.ಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಿಂದ ಪ್ರಮುಖ ಬೀದಿಗಳ ಮುಖಾಂತರ ಕಾಲ್ನಡಿಗೆಯಿಂದ ಸಂತೆ ಮೈದಾನಕ್ಕೆ ಆಗಮಿಸಿ, ಗಣ್ಯರು ಡಾ. ಬಿ. ಆರ್ .ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

Leave a Reply

Your email address will not be published. Required fields are marked *