ನಾಕುತಂತಿ ಮೀಟಿದ ನಾದಲೀಲೆ’ ಯ ಗಾರುಡಿಗ ಯುಗದ ಧನಿ ಬೇಂದ್ರೆ

 ನಾಕುತಂತಿ ಮೀಟಿದ ನಾದಲೀಲೆ’ ಯ  ಗಾರುಡಿಗ ಯುಗದ ಧನಿ ಬೇಂದ್ರೆ ಎಂದು ಹಿರಿಯ ಸಾಹಿತಿ ಪ್ರೊ ಮ. ಲ. ನ. ಮೂರ್ತಿ ತಿಳಿಸಿದರು.

ಮಧುಗಿರಿ : ಪಟ್ಟಣದ ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಏರ್ಪಡಿಸಿದ ಬೇಂದ್ರೆ ಜನ್ಮದಿನಾಚರಣೆಯ ಮುಖ್ಯ ಅತಿಥಿಯಾಗಿ ದೇಸಿ ಕಾವ್ಯ ಪರಂಪರೆ ಮುಂದುವರಿಸಿಕೊಂಡು ಸ್ವಂತಿಕೆಯನ್ನು ತೋರಿದ ಕವಿ ನೋವನ್ನು ಅರಗಿಸಿಕೊಂಡು  ಪಟ್ಟು ಪಾಡನ್ನೆಲ್ಲ ಹುಟ್ಟು ಹಾಡನ್ನಾಗಿ ಜನಕೆ ನೀಡಿದರು. ನಂತರ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದರು ಎಂದರು.

 ಬೇಂದ್ರೆ ಕುರಿತು ಮಾತನಾಡಿದ ಉಪನ್ಯಾಸಕ ಎಚ್. ನರಸಿಂಹರಾಜು. ನೆಲಮೂಲ ಸಂಸ್ಕ್ರುತಿಯ ಕಸುವನ್ನು ಕನ್ನಡ ಕಾವ್ಯಕ್ಕೆ ತಂದಿತ್ತ ಕವಿ ಜನಸಾಮಾನ್ಯರ ಭಾಷೆಯನ್ನು ಕಾವ್ಯಕ್ಕೆ ಕೊಟ್ಟ ಕೀರ್ತಿ ಅವರದು. ತಿಳಿದು ಬದುಕಿರಿ. ತುಳಿದುಬದುಕದಿರಿ   ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿ. ಕೃಷ್ಣಪ್ಪಅಧ್ಯಕ್ಷತೆ ವಹಿಸಿ ಮಾತನಾಡಿ ಬೇಂದ್ರೆ ಕನ್ನಡ ಕಾವ್ಯಕ್ಕೆ  ಹೊಸ ರೂಪರೇಖೆಗಳನ್ನು ತಂದುಕೊಟ್ಟ ವರಕವಿ. ಅವರ ಕಾವ್ಯ ಪ್ರಭಾವ ಮುಂದಿನ ಕವಿಗಳ ಮೇಲೆ ಆಗಿರುವುದನ್ನು ಅಲ್ಲಲ್ಲಿ ಕಾಣಬಹುದಾಗಿದೆ ಎಂದರು.

 ಉಪನ್ಯಾಸಕರಾದ ಗೋವಿಂದರಾಜು.ಮಣಿಕಂಠ. ವಿನಯ್ ಕುಮಾರ್. ಬೇಂದ್ರೆಯ ಮೇಘದೂತ  ಅನುವಾದ ಕುರಿತು ಮಾತನಾಡಿದರು. ಚಿತ್ತಯ್ಯ. ರಂಗಸ್ವಾಮಯ್ಯ. ಬೇಂದ್ರೆ ಕವಿತೆಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿವೃಂದ ಹಾಜರಿದ್ದರು.

Leave a Reply

Your email address will not be published. Required fields are marked *