ಉಚಿತ ನೋಟು ಪುಸ್ತಕಗಳ ವಿತರಣೆ-ವಿನೋದ್ ಎಂ.ಚವ್ಹಾಣ್

ಬಳ್ಳಾರಿ, ಫೆ.19: ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವದ ಅಂಗವಾಗಿ, ಕರ್ನಾಟಕ ಮರಾಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ (ರಿ), ಬಳ್ಳಾರಿ ಇವರ ವತಿಯಿಂದ ತಾಲ್ಲೂಕಿನ ಸಂಗನಕಲ್‌ನ ಅಂಬೇಡ್ಕರ್ ಕಾಲೊನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತವಾಗಿ ನೋಟು ಪುಸ್ತಕಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಯುವ ಅಧ್ಯಕ್ಷರಾದ ವಿನೋದ್ ಎಂ. ಚವ್ಹಾಣ್ ಅವರು ಶಿವಾಜಿ ಮಹಾರಾಜರ ಸಾಹಸಗಾಥೆ, ದೇಶಪ್ರೇಮ ಮತ್ತು ಆದರ್ಶಗಳು ಮಕ್ಕಳಿಗೆ ಪ್ರೇರಕವಾಗಲಿ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಂತರ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ಹಂಚಲಾಯಿತು. ಈ ಕಾರ್ಯಕ್ರಮದಲ್ಲಿ ಆರ್.ಎಲ್ ಜಾಧವ್ (ಜಿಲ್ಲಾ ಗೌರವಾಧ್ಯಕ್ಷರು)ಶಂಕರರಾವ್ ಗಾಯಕ್ವಾಡ್ (ಜಿಲ್ಲಾ ಉಪಾಧ್ಯಕ್ಷರು) ಮತ್ತು ಶಾಲೆಯ ವಿಜಯಕುಮಾರ್ ಮತ್ತಿತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

One thought on “ಉಚಿತ ನೋಟು ಪುಸ್ತಕಗಳ ವಿತರಣೆ-ವಿನೋದ್ ಎಂ.ಚವ್ಹಾಣ್

Leave a Reply

Your email address will not be published. Required fields are marked *