ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಾರಿ ಶಕ್ತಿಗೆ ಪ್ರಧಾನಮಂತ್ರಿ ವಂದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಾರಿ ಶಕ್ತಿಗೆ ವಂದನೆ ಸಲ್ಲಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ ;

“ಮಹಿಳಾ ದಿನದಂದು, ನಮ್ಮ ನಾರಿ ಶಕ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಗಳಿಗೆ ನಾನು ವಂದಿಸುತ್ತೇನೆ. ಭಾರತ ಸರ್ಕಾರವು ಘನತೆ ಮತ್ತು ಅವಕಾಶಕ್ಕೆ ಒತ್ತು ನೀಡುವ ಮೂಲಕ ತನ್ನ ವಿವಿಧ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕರಿಸುತ್ತದೆ.”

“ಆರ್ಥಿಕ ಒಳಗೊಳ್ಳುವಿಕೆಯಿಂದ ಸಾಮಾಜಿಕ ಭದ್ರತೆ, ಗುಣಮಟ್ಟದ ಆರೋಗ್ಯ ಸೇವೆಯಿಂದ ವಸತಿ, ಶಿಕ್ಷಣದಿಂದ ಉದ್ಯಮಶೀಲತೆಗೆ, ಭಾರತದ ಅಭಿವೃದ್ಧಿ ಪಯಣದಲ್ಲಿ ನಮ್ಮ ನಾರಿ ಶಕ್ತಿಯನ್ನು ಮುಂಚೂಣಿಯಲ್ಲಿಡಲು ಹಲವು ಪ್ರಯತ್ನಗಳನ್ನು ಮಾಡಲಾಗಿದೆ. ಈ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯುತ್ತದೆ.”

“ಇಂದು ಸಂಜೆ 6 ಗಂಟೆಗೆ, ನಾನು ಕಛ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತೇನೆ, ಇದು ನಮ್ಮ ಸಮಾಜಕ್ಕೆ ಮಹಿಳಾ ಸಂತರ ಕೊಡುಗೆಗಳನ್ನು ಬಿಂಬಿಸುತ್ತದೆ.

ಸಂಸ್ಕೃತಿಯ ವಿವಿಧ ಅಂಶಗಳು, ಕೇಂದ್ರದ ವಿವಿಧ ಕಲ್ಯಾಣ ಕ್ರಮಗಳು ಮತ್ತು ಹೆಚ್ಚಿನವುಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ. https://t.co/ImLHzdJpEQ

Leave a Reply

Your email address will not be published. Required fields are marked *