ನೂತನ ಶಿಕ್ಷಣ ನೀತಿಯಿಂದ ಸರ್ವರಿಗೂ ಸಮಾನ ಅವಕಾಶ; ಎಲ್ಲ ವಿದ್ಯಾರ್ಥಿಗಳೂ ಸಾಧಕರಾಗಬೇಕು: ಶಾಸಕ ರವಿಸುಬ್ರಹ್ಮಣ್ಯ

ಬೆಂಗಳೂರು, ಮಾ.10: ವಿದ್ಯೆ ಒಂದು ತಪಸ್ಸಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದೇ ಗುಣಮಟ್ಟದ ಶಿಕ್ಷಣ ಹಿಗಾಗಿಯೇ ಸರ್ಕಾರ ಎಲ್ಲರಿಗೂ ಶಿಕ್ಷಣ ಒದಗಿಸಲು ಅವಿರತವಾಗಿ ಶ್ರಮಿಸುತ್ತಿದ್ದು, ಈ ಕಾರ್ಯವನ್ನು ನೂತನ ಶಿಕ್ಷಣ ನೀತಿ ಮಾಡುತ್ತಿದೆ ಎಂದು ಬಸವನಗುಡಿ  ಶಾಸಕ ಶ್ರೀ ರವಿಸುಬ್ರಹ್ಮಣ್ಯ ತಿಳಿಸಿದ್ದಾರೆ.

ಹನುಮಂತನಗರದ ಶ್ರೀ ಕುಮಾರಸ್ವಾಮಿ ಶಿಕ್ಷಣ ಸಂಸ್ಥೆಯ 58ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು ಶಿಕ್ಷಣ ಯಾರೊಬ್ಬರ ಸ್ವತ್ತೂ ಅಲ್ಲ, ಅದು ಸಾಧಕರ ಸ್ವತ್ತು. ನವ ಭಾರತದಲ್ಲಿ ಎಲ್ಲಾ ಜಾತಿ ಜನಾಂಗ, ವರ್ಗದವರಿಗೂ ಉನ್ನತ ಶಿಕ್ಷಣವು ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನೂತನ ಶಿಕ್ಷಣ ನೀತಿ ಭಾರತವನ್ನು ಮತ್ತೆ ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸಲಿದ್ದು, ಪ್ರತಿಯೊಬ್ಬರು ಸಾಧಕರಾಗಬೇಕು ಎಂದು ತಿಳಿಸಿದರು. 

ಪತ್ರಕರ್ತ ಟಿ.ಎಂ ಸತೀಶ್ ಮಾತನಾಡಿ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಇಂದಿನ ಅಗತ್ಯವಾಗಿದೆ. ಸಂಸ್ಕೃತಿ ಮತ್ತು ಸಂಸ್ಕಾರ ಭಾರತದ ಬುನಾದಿಯಾಗಿದ್ದು ವಿದ್ಯಾರ್ಥಿಗಳು ತಮ್ಮ ತನ ಮರೆಯದೆ ಇಷ್ಟ ಪಟ್ಟು ಓದಿ ನಾಡಿಗೆ, ಶಾಲೆಗೆ ಕೀರ್ತಿ ತರಬೇಕು ಎಂದರು.

ಮಾಜಿ ನಗರ ಸಭಾ ಸದಸ್ಯರಾದ ಶ್ರೀ ಎಂ ವೆಂಕಟೇಶ್, ಸಂಸ್ಥೆಯ ಅಧ್ಯಕ್ಷರಾದ ಎಸ್ ಎಂ ಬಾಲಕೃಷ್ಣ, ಕಾರ್ಯದರ್ಶಿ ವಿ.ಡಿ ಗಜೇಂದ್ರ, ಜಂಟಿ ಕಾರ್ಯದರ್ಶಿಗಳಾದ ಶ್ರೀ ಬಿ ನಾಗೇಶ್ ಮತ್ತು ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರದಲ್ಲಿ ಸಾಸ್ಕೃತಿಕ ಕಾರ್ಯಕ್ರಮಗಳು ಸೊಸಾಗಿ ಮೂಡಿಬಂದವು.

Leave a Reply

Your email address will not be published. Required fields are marked *